ಮದಕರಿಪುರದಲ್ಲಿ ವಿಶೇಷ ಎನ್.ಎಸ್.ವಿ. ಪಾಕ್ಷಿಕ ಆಚರಣೆ

ಚಿತ್ರದುರ್ಗ

       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಚಿತ್ರದುರ್ಗ ತಾಲ್ಲೂಕು ರವರ ಸಹಯೋಗದೊಂದಿಗೆ ಮದಕರಿಪುರ ಅಂಗನವಾಡಿ ಕೇಂದ್ರದಲ್ಲಿ ವಿಶೇಷ ಎನ್.ಎಸ್.ವಿ. ಪಾಕ್ಷಿಕ ಆಚರಿಸಲಾಯಿತು.

       ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ತಮ್ಮ ಅಂಗನವಾಡಿ ಕೇಂದ್ರಗಳಲ್ಲಿ ತಾಯಂದಿರ ಸಭೆ ಮಾಡುವಾಗ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ವಿಶೇಷವಾಗಿ ಪುರುಷರು ಭಾಗವಹಿಸಬಹುದಾದ ಎನ್.ಎಸ್.ವಿ. ಯೋಜನೆಯ ಬಗ್ಗೆ ಚರ್ಚಿಸುವುದು ಇಂದಿನ ಬಹು ಮುಖ್ಯ ವಿಷಯವಾಗಿದೆ. ಸಂಸಾರದಲ್ಲಿ ಗಂಡ ಹೆಂಡತಿ ಸಮಾನ ಜವಾಬ್ದಾರಿಗಳನ್ನು ನಿರ್ವಹಿಸಿದಾಗ ಕುಟುಂಬ ಕ್ಷೇಮಕರವಾಗಿರುತ್ತದೆ.

       ಹೊರುವ (ಗರ್ಭಧರಿಸುವ), ಹೆರುವ (ಜನ್ಮನೀಡುವ), ಮಕ್ಕಳಿಗೆ ಹಾಲುಣಿಸುವ ಹಾಗೂ ಕುಟುಂಬ ಗಾತ್ರ ದೊಡ್ಡದಾದಾಗ ಕುಟುಂಬ ಯೋಜನೆಗಳನ್ನು ಅನುಸರಿಸುವ ಎಲ್ಲಾ ಹೊರೆಯನ್ನು ಮಹಿಳೆಯರೇ ನಿರ್ವವಹಿಸುತ್ತಿದ್ದಾರೆ. ಹಾಗಾದರೆ ಕುಟುಂಬ ಕಲ್ಯಾಣ ವಿಷಯದಲ್ಲಿ ಪುರುಷರ ಜವಾಬ್ದಾರಿ ಪಾಲಾದರೂ ಏನು ಎಂದು ಪ್ರಶ್ನಿಸುವುದು ಅಗತ್ಯವಾಗಿದೆ. ಹೊಸ ಗುರುತು ಮತ್ತು ಘನತೆಯನ್ನು ಹೊಂದಲು ಷುರುಷರು ಕುಟುಂಬ ಯೋಜನೆಯಲ್ಲಿ ಪಾಲ್ಗೊಳ್ಳುವುದು ‘ನೋ-ಸ್ಕಾಲ್ ಪೆಲ್ ವ್ಯಾಸೆಕ್ಟಮಿ’ ಇದು ಒಂದು ಸರಳ ಹಾಗೂ ಸುರಕ್ಷಿತ ವಿಧಾನ, ವೃಷಣದಿಂದ ವೀರ್ಯಾಣು ಸಾಗಿಸುವ ನಾಳವನ್ನು ಕತ್ತರಿಸಿ ಎರಡು ಕೊನೆಯ ಭಾಗಗಳಿಗೆ ಗಂಟು ಹಾಕುವುದು ಇದರಿಂದ ವೃಷಣದ ನಾಳಗಳಿಂದ ಸಾಗುವ ವೀರ್ಯಾಣುವನ್ನು ತಡೆಗಟ್ಟಲಾಗುತ್ತದೆ, ಇದರಿಂದ ಪುರುಷರಲ್ಲಿ ಲೈಂಗಿಕ ಸಾಮಥ್ರ್ಯ ಕಡಿಮೆಯಾಗುವುದಿಲ್ಲ, ಈ ಚಿಕಿತ್ಸೆಯಿಂದ ಯಾವುದೇ ದೈಹಿಕ ನಿಶ್ಯಕ್ತಿ ಉಂಟಾಗುವುದಿಲ್ಲ ಇನ್ನು ಮುಂದೆ ತಮಗೆ ಮಕ್ಕಳು ಬೇಡವೆಂದು ನಿರ್ಧರಿಸುವ ಎಲ್ಲಾ ಪುರುಷರು ಈ ಎನ್.ಎಸ್.ವಿ.ಯೋಜನೆಯಲ್ಲಿ ಭಾಗವಹಿಸಬಹುದು ಸಣ್ಣ ಪುಟ್ಟ ನೋವು ಬಿಟ್ಟರೆ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ ಚಿಕಿತ್ಡೆಯ 48 ಗಂಟೆಗಳ ನಂತರ ಕೆಸಲ ಕಾರ್ಯಗಳನ್ನು ನಿರ್ವಹಿಸಬಹುದು ಈ ಪಾಕ್ಷಿಕವು ದಿನಾಂಕ 21 ನವೆಂಬರ್ ನಿಂದ ಡಿಸೆಂಬರ್ 4 ರ ತನಕ ನಡೆಯುತ್ತಿದೆ ಆಸಕ್ತರು ಸಾರ್ವಜನಿಕ ಆಸ್ಪತ್ರೆ ಚಿತ್ರದುರ್ಗ ಇಲ್ಲಿ ಸೇವೆಯನ್ನು ನುರಿತ ತಜ್ಞರಿಂದ ಪಡೆಯಬಹುದಾಗಿದೆ.

         ಹೆಚ್ಚಿನ ಮಾಹಿತಿಗೆ ನಿಮ್ಮ ಕ್ಷೇತ್ರಕ್ಕೆ ಭೇಟಿ ನೀಡುವ ಆರೋಗ್ಯ ಸಹಾಯಕರನ್ನು, ಆಶಾ ಕಾರ್ಯಕರ್ತೆಯರನ್ನು ಬೇಟಿಯಾಗಿ ಅಲ್ಲದೇ ಉಚಿತ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.

        ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕರು ಹೆಚ್1ಎನ್1 ಜ್ವರ ನಿರ್ವಾಹಣೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ಚಿಚಾರಕರಾದ ಜಾಹೀರಾ ಬಾನು, ಆರೋಗ್ಯ ಸಹಾಯಕರಾದ ನಾಗರತ್ನ ಪವಿತ್ರ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಕರಪತ್ರ ವಿತರಿಸಲಾಯಿತು. ಮನೆ ಮನೆ ಬೇಟಿನೀಡಿ ಮುಖಾ ಮುಖಿ ಸಂವಹನ ನಡೆಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link