ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಕೈ ಬರವಣಿಗೆ ಸಹ ಬಹಳಮುಖ್ಯ : ಕ್ಷೇತ್ರಶಿಕ್ಷಣಾಧಿಕಾರಿ

ಹಿರಿಯೂರು :

        ವಿದ್ಯಾರ್ಥಿಗಳು ಪರೀಕ್ಷೆ ಭೀತಿಯಿಂದ ಹೊರಬಂದು ಉತ್ತರ ಪತ್ರಿಕೆಯಲ್ಲಿ ಉತ್ತರಗಳನ್ನು ಅತ್ಯಂತ ಸ್ಪಷ್ಟವಾಗಿ, ಅಂದವಾಗಿ ಅರ್ಥವತ್ತಾಗಿ ಬರೆಯುವ ಮೂಲಕ ಉತ್ತಮ ಯಶಸ್ಸುಗಳಿಸಲು ಸಾಧ್ಯ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣಇಲಾಖೆ ನೇತೃತ್ವದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಇಂಗ್ಲೀಷ್, ಸಮಾಜಶಾಸ್ತ್ರ, ಗಣಿತ ವಿಷಯಕ್ಕೆ ಸಂಬಂಧಿಸಿದಂತೆ “ವಿದ್ಯಾರ್ಥಿ ಸಂವಾದ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಕೈ ಬರವಣಿಗೆ ಸಹ ಬಹಳಮುಖ್ಯ, ಕೈ ಬರವಣಿಗೆ ಒಬ್ಬ ವ್ಯಕ್ತಿಯ ಆಂತರಿಕ ಹಾಗೂ ಬಾಹ್ಯಸೌಂದರ್ಯವನ್ನು ಪ್ರತಿಬಿಂಬಿಸುವುದರ ಜೊತೆಗೆ ಅ ವ್ಯಕ್ತಿಯ ವ್ಯಕ್ತಿತ್ವವನ್ನು ಸಹ ಬಿಂಬಿಸುತ್ತದೆ, ವಿದ್ಯಾರ್ಥಿಗಳಿಗೆ ಸತತ ಬರವಣಿಗೆಯ ಅಭ್ಯಾಸದಿಂದ ಹೆಚ್ಚು ಕಾಲ ನೆನಪಿನಲ್ಲಿ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಸತತ ಪರಿಶ್ರಮ ಸೇರಿದಂತೆ ಶಿಸ್ತು, ಸಂಯಮ, ಉತ್ತಮ ಅವ್ಯಾಸಗಳು ಹಾಗೂ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂಬುದಾಗಿ ಅವರು ಹೇಳಿದರು.
ಸ್ವಾತಂತ್ರ್ಯ ನಂತರ ದೇಶದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಈ ನಿಟ್ಟಿನಲ್ಲಿ ಕಡ್ಡಾಯ ಶಿಕ್ಷಣ, ಬಿಸಿಯೂಟಯೋಜನೆ, ಕ್ಷೀರಭಾಗ್ಯ, ಸರ್ವಶಿಕ್ಷಾ ಅಭಿಯಾನ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಜೋಜನೆಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳವಂತೆ ಕರೆ ನೀಡಿದರು.

       ಬಡತನ ಸಾಧನೆಗೆ ಅಡ್ಡಿಅಲ್ಲಾ ಹಾಗೂ ಸಾಧನೆ ಯಾರಸೂತ್ತು ಅಲ್ಲಾ, ಬೀದಿಧೀಪದ ಕೆಳಗೆ ಓದಿ ಈ ದೇಶದ ಮಹಾನ್ ಸಾದಕರಾದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಡಾ||ಅಂಬೇಡ್ಕರ್ ರವರ ಸಾದನೆಗಳು ನಿಮ್ಮ ಜೀವನದ ಆದರ್ಶಗಳಾಗಬೇಕು ಎಂಬುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.ಆರಂಭದಲ್ಲಿ ಪ್ರಾಸ್ಥವಿಕ ನುಡಿಗಳನ್ನಾಡಿದ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಮಾತನಾಡಿ, ವಿದ್ಯಾರ್ಥಗಳಲ್ಲಿ ಮನೆಮಾಡಿರುವ ಪರೀಕ್ಷೆಯಭಯ, ಭೀತಿಅಂತಕಗಳನ್ನು ದೂರಮಾಡಿ ಅವರಲ್ಲಿ ಅತ್ಮಸ್ಥರ್ಯ, ಅತ್ಮವಿಶ್ವಾಸ, ತುಂಬಿ ಕ್ರೀಯಾಶೀಲಾ ಗೊಳಿಸುವ ನಿಟ್ಟಿನಲ್ಲಿ ಇಂತಹ ವಿದ್ಯಾರ್ಥಿ ಸಂವಾದ ಕಾರ್ಯಕ್ರಮಗಳು ಅತ್ಯಗತ್ಯ ಎಂದರು.

       ವೇದಿಕೆಯಲ್ಲಿ ಯಜ್ಞವಲ್ಕ್ಯವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಸುರೇಶ್, ಶಿಕ್ಷಣಸಂಯೋಜಕರಾದ ಶಶೀಧರ್, ಸಂಪನ್ಮೊಲ ವ್ಯಕ್ತಿಗಳಾದ ಶರೀಫ್‍ಜಾನ್, ಮೈಲುಸ್ವಾಮಿ, ವಿಜಯ್, ಪರ್ತಕರ್ತರಾದ ಪಿ.ಆರ್.ಸತೀಶ್‍ಬಾಬು, ವಾಣಿವಿಲಾಸ ವಿದ್ಯಾಸಂಸ್ಥೆಯ ಖಜಾಂಚಿ ಆರ್.ವಸಂತ್‍ಕುಮಾರ್ ಉಪಸ್ಥಿತರಿದ್ದರು.

        ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿಯರುಗಳಾದ ಶ್ರೀಮತಿಹೇಮಲತಾ, ಶ್ರೀಮತಿಸೌಮ್ಯ, ವ್ಯವಸ್ಥಾಪಕಿ ಮೋಹಸಿನ್‍ಫಿರದೋಸ್, ಉಮೇಶ್, ರಜೀಯಬೇಗಂ, ಗಂಗಮ್ಮ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link