ಮಧುಗಿರಿ
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಆರ್.ಗೊಲ್ಲರಹಟ್ಟಿಯ ಗೋಪಾಲಕೃಷ್ಣ ಎನ್ನುವ ವ್ಯಕ್ತಿ ಬಲಗಾಲು ಇಲ್ಲದ ಅಂಗವಿಕಲನಾಗಿರುತ್ತಾರೆ. ಈತನ ಜೀವನ ನಿರ್ವಹಣೆ ಕಷ್ಟಕರವಾಗಿರುತ್ತದೆ. ಈತನಿಗೆ ಸರ್ಕಾರದಿಂದ ಉಚಿತವಾಗಿ ನೀಡುವ ತ್ರಿಚಕ್ರ ಮೋಟಾರ್ ವಾಹನದ ಅವಶ್ಯತೆ ಇರುತ್ತದೆ.
ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 01-06-2017 ರಿಂದ ಸತತವಾಗಿ ಅರ್ಜಿಗಳನ್ನು ಸಲ್ಲಿಸಿ, ಮನವಿಯನ್ನು ಮಾಡಿಕೊಂಡಿರುತ್ತಾರೆ. ಆದರೂ ಸಹ ಇಲ್ಲಿಯವರೆಗೂ ಸದರಿ ಅಂಗವಿಕಲನಿಗೆ ವಾಹನ ನೀಡಿರುವುದಿಲ್ಲ. ಈ ಹಿಂದೆ ಇದ್ದಂತಹ ಮಧುಗಿರಿ ವಿಧಾನ ಸಭಾ ಸದಸ್ಯರಿಗೂ ಮನವಿಯನ್ನು ನೀಡಿದ್ದೆ ಎಂದು ಪತ್ರಿಕೆಗೆ ತಿಳಿಸಿರುತ್ತಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮಾನವೀಯತೆ ಮತ್ತು ಕಾನೂನಿನ ಅಡಿಯಲ್ಲಿ ಸದರಿ ಅಂಗವಿಕಲನಿಗೆ ತ್ರಿಚಕ್ರ ಮೋಟಾರ್‍ವಾಹನ ಕೊಟ್ಟರೆ ಬಹಳಷ್ಟು ಅನುಕೂಲವಾಗುತ್ತದೆ.