ದಾವಣಗೆರೆ:
ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದಿಂದ ನಾಳೆ (ನ.18ರಂದು) ನಗರದಲ್ಲಿ ಶ್ರೀವಾಲ್ಮೀಕಿ ಪ್ರತಿಮೆಯ ಬೃಹತ್ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಸಮಾಜದ ಮುಖಂಡ, ಲೋಕಿಕೆರೆ ಜಿ.ಪಂ. ಕ್ಷೇತ್ರದ ಸದಸ್ಯ ಕೆ.ಹೆಚ್.ಓಬಳಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 10 ಗಂಟೆಗೆ ಇಲ್ಲಿನ ನಿಟ್ಟುವಳ್ಳಿಯ ಶ್ರೀದುರ್ಗಾಂಭಿಕ ದೇವಿ ದೇವಸ್ಥಾನದ ಆವರಣದಿಂದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಂದ ಚಾಲನೆ ಪಡೆಯುವ ವಾಲ್ಮೀಕಿ ಪ್ರತಿಮೆಯ ಬೃಹತ್ ಮೆರವಣಿಗೆಯು ಹೆಚ್.ಕೆ.ಆರ್. ವೃತ್ತ, ನಿಟ್ಟುವಳ್ಳಿ ಮುಖ್ಯ ರಸ್ತೆ, ಶಿವಪ್ಪಯ್ಯ ವೃತ್ತ, ಜಯದೇವ ವೃತ್ತ, ಪ್ರವಾಸಿ ಮಂದಿರ ರಸ್ತೆ, ಪಿ.ಬಿ.ರಸ್ತೆ, ಅರುಣಾ ಟಾಕೀಸ್ ವೃತ್ತದ ಮೂಲಕ ಸಂಚರಿಸಿ ವೀರ ಮದಕರಿ ನಾಯಕ ವೃತ್ತ ತಲುಪಿ ಮುಕ್ತಾಯವಾಗಲಿದೆ ಎಂದು ಹೇಳಿದರು.
ಬೆಳ್ಳಿ ರಥದಲ್ಲಿ ನಡೆಯುವ ವಾಲ್ಮೀಕಿ ಪ್ರತಿಮೆಯ ಮೆರವಣಿಗೆಯಲ್ಲಿ ಬೆಳಗಾವಿಯ ಡಿಜೆ, ಮಂಗಳೂರಿನ ಚಂಡೆ, ಡೊಳ್ಳು, ಕೋಲಾಟ ಸೇರಿದಂತೆ ವಿವಿಧ ಜಾನಪದ ತಂಡಗಳು ಭಾಗವಹಿಸಲಿವೆ. ಅಲ್ಲದೆ, ನಾಯಕ ಸಮಾಜ ಬೆಳೆದು ಬಂದಿರುವ ಕುರಿತು ರೂಪಕ ಪ್ರದರ್ಶಿಸುವ ಮಾದರಿಯಲ್ಲಿ ಸ್ತಬ್ಧ ಚಿತ್ರಗಳು ಮೆರವಣಿಗೆಗೆ ವಿಶೇಷ ಆಕರ್ಷಣೆ ನೀಡಲಿವೆ. ಸುಮಾರು 5ರಿಂದ 10 ಸಾವಿರ ಜನ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ವಿನಾಯಕ ಪೈಲ್ವಾನ್, ಎಂ.ಬಿ.ಹಾಲಪ್ಪ, ಲಕ್ಷ್ಮಣ್ ಕೆಟಿಜೆ ನಗರ, ಗಣೇಶ್ ಕುಂದುವಾಡ, ಚಿಕ್ಕಿ ಮಂಜುನಾಥ್, ತೋಟದ ಮನೆ ಬಸವರಾಜ್, ನಿಟ್ಟುವಳ್ಳಿ ದುರುಗೇಶ್, ಗೋಶಾಲೆ ಬಸವರಾಜ್, ಅಲಗೋಡಿ ರಾಜಣ್ಣ, ಶಾಮನೂರು ಪ್ರವೀಣ್, ಗುಮ್ಮನೂರು ಶ್ರೀನಿವಾಸ್, ಹದಡಿ ಗಣೇಶ್, ಪ್ರವೀಣ್, ವಿಜಯ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ