ಕೆಟ್ಟುಹೋದ ಕುಡಿಯುವ ನೀರಿನ ಘಟಕ : ನೀರಿಗಾಗಿ ಗ್ರಾಮಸ್ಥರ ಪರದಾಟ.

ಚಳ್ಳಕೆರೆ

      ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟುಹೋಗಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ನಾಲ್ಕೈದು ಕಿ.ಮಿ. ದೂರದಿಂದ ಕುಡಿಯುವ ನೀರು ತರುವ ಸ್ಥಿತಿ ಉಂಟಾಗಿದೆ.

       ತಳಕು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹೊನ್ನೂರು ಗ್ರಾಮದಲ್ಲಿ ಹಾಲಿ ಇರುವ ಏಕೈಕ ಕುಡಿಯುವ ಶುದ್ದ ನೀರಿನ ಘಟಕ ಕೆಟ್ಟು ಹೋಗಿ ವರ್ಷಗಳೆ ಕಳೆದಿದ್ದು, ಈ ಬಗ್ಗೆ ಸಂಬಂಧಪಟ್ಟ ಯಾವುದೇ ಅಧಿಕಾರಿ ಗಮನಹರಿಸದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಘಟಕಗಳ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಗ್ರಾಮದ ಜನರು ಪ್ರತಿನಿತ್ಯ ಒಂದು ಕೊಡ ನೀರಿಗಾಗಿ ನಾಲ್ಕೈದು ಕಿ.ಮೀ. ದೂರ ಸಾಗಬೇಕಿದೆ.

        ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಿದರೂ ಸಹ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಲಿ, ಕುಡಿಯುವ ನೀರು ಘಟಕದ ದುರಸ್ಥಿಗೆ ಮುಂದಾಗಿಲ್ಲ. ಗ್ರಾಮದ ಜನರ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಗ್ರಾಮಸ್ಥರು ಪಂಚಾಯಿತಿ ಆಡಳಿತದ ಬಗ್ಗೆ ಮತ್ತು ತಾಲ್ಲೂಕು ಪಂಚಾಯಿತಿ ಆಡಳಿತದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಗ್ರಾಮದಲ್ಲಿ ಇರುವ ಕುಡಿಯುವ ನೀರಿನ ಘಟಕವನ್ನು ದುರಸ್ಥಿತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

        ಈ ಬಗ್ಗೆ ಪತ್ರಿಕೆಯೊಂದಿಗೆ ನೋವು ಹಂಚಿಕೊಂಡ ಗ್ರಾಮದ ಮುಖಂಡ ಸೈಯದ್ ಕಲೀಲ್ ಗ್ರಾಮದ ಹಲವಾರು ಅಂಗಡಿಗಳಲ್ಲಿ ದಿನಸಿ ವಸ್ತುಗಳಿಂದಗಿಂತ ಹೆಚ್ಚಾಗಿ ಮಧ್ಯಪಾನದ ಬಾಟಲ್‍ಗಳು ದೊರೆಯುತ್ತಿವೆ. ಆದರೆ, ಕುಡಿಯುವ ನೀರು ಮಾತ್ರ ಎಲ್ಲೂ ದೊರೆಯುತ್ತಿಲ್ಲ, ಗ್ರಾಮದ ಒಂದೇ ಒಂದು ಕುಡಿಯುವ ನೀರಿನ ಘಟಕ ತಟಸ್ಥವಾಗಿದೆ. ಕುಡುಕರ ಹಾವಳಿ ಹೆಚ್ಚಿ, ಅಪಘಾತಗಳು ಸಂಭವಿಸುತ್ತಿವೆ, ಅಮಾಯಕರು ಬಲಿಯಾಗುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಘಟಕವನ್ನು ದುರಸ್ಥಿಗೊಳಿಸದೇ ಇದ್ದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವ ಸೂಚನೆಯನ್ನು ಗ್ರಾಮಸ್ಥರು ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link