ತತ್ವ-ವಚನಗಳ ಮೂಲಕ ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ ಶ್ರೇಷ್ಠ ದಾರ್ಶನಿಕ ಮಹಾಯೋಗಿ ವೇಮನ

ಚಳ್ಳಕೆರೆ

       ಸಮಾಜದಲ್ಲಿ ಅಡಗಿದ್ದ ಅಜ್ಞಾನದ ಅಂದಕಾರವನ್ನು ದೂರವಾಗಿಸಲು ತಮ್ಮದೇಯಾದ ತತ್ವಾದರ್ಶಗಳ ಮೂಲಕ ಬೆಳಕು ಚೆಲ್ಲಿದ ಅನೇಕ ಮಹಾನೀಯರು ಈ ನಾಡಿನಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ್ದಾರೆ. ಅಂತಹ ಮಹಾನ್ ದಾರ್ಶನಿಕರಲ್ಲಿ ಮಹಾಯೋಗಿ ವೇಮನ ಸಹ ಒಬ್ಬರಾಗಿದ್ಧಾರೆ. ತಮ್ಮ ಲೌಕಿಕ ಬದುಕಿಗೆ ವಿದಾಯ ಹೇಳಿ ಧಾರ್ಮಿಕ ಜ್ಯೋತಿಯನ್ನು ಬೆಳಗುವಲ್ಲಿ ಯಶಸ್ಸಿಯಾದವರು ಮಹಾಯೋಗಿ ವೇಮನ ಮಹರ್ಷಿಗಳು ಎಂದು ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದರು.

      ಅವರು, ಶನಿವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶ್ರೀಮಹಾಯೋಗಿ ವೇಮನ 607ನೇ ಜಯಂತೋತ್ಸವ ಕಾರ್ಯಕ್ರಮವನ್ನು ಶಾಸಕ ಟಿ.ರಘುಮೂರ್ತಿಯವರ ಅನುಪಸ್ಥಿತಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ಕಾರಣಾಂತರದಿಂದ ಶಾಸಕರು ಕಾರ್ಯಕ್ರಮಕ್ಕೆ ಆಗಮಿಸದೇ ಇದ್ದು, ಸಮುದಾಯದ ಎಲ್ಲಾ ಮುಖಂಡರಿಗೂ ಶುಭಾಶಯವನ್ನು ತಿಳಿಸಿದ್ಧಾರೆಂದರು.

       ಮಹಾಯೋಗಿ ವೇಮನ ಬಗ್ಗೆ ಉಪನ್ಯಾಸ ನೀಡಿದ ಕನ್ನಡ ಪ್ರಾಧ್ಯಾಪಕ ಎಸ್.ಬಿ.ಭೀಮಾರೆಡ್ಡಿ ಮಾತನಾಡಿ, ಬಾಲ್ಯದಲ್ಲೇ ಧಾರ್ಮಿಕ ವಿಚಾರಗಳ ಬಗ್ಗೆ ನಿರಾಸಕ್ತಿ ಹೊಂದಿದ್ದ ವೇಮನರು ಸಮಾಜದಲ್ಲಿ ನಡೆಯುತ್ತಿದ್ದ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷ್ಯೆಯನ್ನು ವಹಿಸಿದ್ದರು. ಆದರೆ, ಬಾಲ್ಯವ್ಯವಸ್ಥೆ ಮುಗಿದು ಪ್ರಾಪ್ತವಯಸ್ಸಿಗೆ ಬಂದಾಗ ಇವರಿ ಸಮಾಜದಲ್ಲಿ ಬೇರೂರಿರುವ ಹಲವಾರು ಅನಿಷ್ಠಪದ್ದತಿಗಳ ಬಗ್ಗೆ ಚಿಂತಾಕ್ರಾಂತರಾದರು.

         ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಚಿಂತಿಸಿ ಜನರನ್ನು ತಮ್ಮದೇಯಾದ ತತ್ವ, ವಚನಗಳ ಮೂಲಕ ಜಾಗೃತಿ ಮೂಡಿಸುವಲ್ಲಿ ಮುಂದಾದರು. ಇವರು ಅಂದಾಜು 1167ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ಸಿ.ಪಿ.ಬ್ರೌನ್ ಎಂಬುವ ಅಧಿಕಾರಿ ಇವರ ವಚನಗಳ ಕುರಿತು ಸಂಶೋಧನೆಗೊಳಿಸಿ ಬೆಳಕು ಚೆಲ್ಲುವಲ್ಲಿ ಮುಂದಾದರು ಎಂದರು.

         ಕಾರ್ಯಕ್ರಮದಲ್ಲಿ ಬಿಇಒ ಸಿ.ಎಸ್.ವೆಂಕಟೇಶಪ್ಪ, ಸಮುದಾಯದ ಹಿರಿಯ ಮುಖಂಡ ಬಿ.ಆರ್.ತಿಮ್ಮಾರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ತಿಪ್ಪಮ್ಮಲಿಂಗಾರೆಡ್ಡಿ, ತಾಲ್ಲೂಕು ಪಂಚಾಯತಿ ಸದಸ್ಯ ಈ.ರಾಮಾರೆಡ್ಡಿ, ನಗರಸಭಾ ಸದಸ್ಯರಾದ ಕೆ.ಸಿ.ನಾಗರಾಜು, ಸುಮಾಭರಮಣ್ಣ, ಸಿ.ಕವಿತಾ, ಸಾವಿತ್ರಿ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಮಾಲತಿ, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಪ್ರಭಾರ ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮಲೆಕ್ಕಿಗ ರಾಜೇಶ್ ಡಿ.ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link