ಮಡಿಕೇರಿ:
ಮಡಿಕೇರಿಯ ಸಮೀಪದಲ್ಲಿ ಎರಡು ಕಾರುಗಳು ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿದ್ದು ಒಂದೇ ಕುಟುಂಬದ ಇಬ್ಬರು ಮೃತಪಟ್ಟ ದಾರುಣ ಘಟನೆ ಆನೆಕಾಡು ಬಳಿ ಸಂಭವಿಸಿದೆ.
ಮೃತರನ್ನು ಪಿರಿಯಾಪಟ್ಟಣ ತಾಲೂಕಿನ ಮೆಲ್ಲಳ್ಳಿಯವರಾದ ಸತೀಶ್ (42) ಮತ್ತು ಸಹೋದರಿ ಜ್ಯೋತಿ (36) ಎಂದು ಗುರುತಿಸಲಾಗಿದೆ.ಮಡಿಕೇರಿ ಕಡೆಗೆ ಬರುತ್ತಿದ್ದ ಸತೀಶ್ ಅವರ ಕಾರಿಗೆ ಎದುರುಗಡೆಯಿಂದ ಬಂದ ಐ-20 ಕಾರು ಢಿಕ್ಕಿ ಹೊಡೆದ ಪರಿಣಾಮ ಅಲ್ಟೋ ಕಾರು ರಸ್ತೆಯಿಂದ ಕಾಡಿನೊಳಕ್ಕೆ ಎಸೆಯಲ್ಪಟಿದೆ ಇದರಿಂದಾಗಿ ಸತೀಶ್ ಅವರು ಸ್ಥಳದಲ್ಲೇ ಸಾವನ್ನ ಪ್ಪಿದ್ದಾರೆ.ಇನ್ನೂ ತೀವ್ರ ಗಾಯಗೊಂಡಿದ್ದ ಜ್ಯೋತಿ ಅವರನ್ನು ಹತ್ತಿರದ ಕುಶಾಲನಗರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸತೀಶ್ ಮತ್ತು ಜ್ಯೋತಿ ಅವರು ಮೆಲ್ಲೇನಹಳ್ಳಿಯ ಶಿವಲಿಂಗೇಗೌಡ ಅವರ ಮಕ್ಕಳು. ಸತೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜ್ಯೋತಿಗೆ ಓರ್ವ ಪುತ್ರಿಯಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.