ಪ್ರಾಣಿಗಳ ಭೇಟೆ: 5 ಜನ ಪ್ರಾಣಿ ಭಕ್ಷಕರ ಬಂಧನ

ಹೊಸದುರ್ಗ:

   ತಾಲೂಕಿನ ಶ್ರೀರಾಂಪುರ ಹೋಬಳಿಯ ತೊಣಚೆನಹಳ್ಳಿ ಬಳಿ ಭಾನುವಾರ ಇಲ್ಲಿನ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 5 ಜನ ಪ್ರಾಣಿ ಭಕ್ಷಕರನ್ನು ಬಂಧಿಸಿ ಬೇಟೆಗೆ ಬಳಸಿದ ಬಂದೂಕು ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

   ತಾಲೂಕಿನಲ್ಲಿ ಹೆಚ್ಚಾಗಿದ್ದ ವನ್ಯಜೀವಿಗಳ ಭೇಟೆ ವಿರುದ್ದ ಸಾರ್ವಜನಿಕರು ಆರಣ್ಯ ಇಲಾಖೆಯ ವಿರುದ್ದ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ ನಂತರ ಕಳೆದ ಒಂದು ವಾರದಿಂದ ಅರಣ್ಯ ಇಲಾಖೆಯವರು ಕಾರ್ಯಾಚರಣೆಗೆ ಬಲೆ ಬೀಸಿದ್ದರು.ಎಂದಿನಂತೆ ಭಾನುವಾರ ಮುಂಜಾನೆ ತೊಣಚೆನಹಳ್ಳಿ ಬಳಿ ಗರಗ ಗ್ರಾಮದ ಕಡೆಯಿಂದ ಭಕ್ಷಕರ ವಾಹನ ಬರುತ್ತಿದೆ ಎಂದು ಸಾರ್ವಜನಿಕರ ಖಚಿತ ಮಾಹಿತಿ ನೀಡಿದ್ದಾರೆ. ತಕ್ಷಣ ಅರಣ್ಯ ವಲಯ ಅಧಿಕಾರಿ ಪ್ರದೀಪ್ ಪವರ್ ತಂಡ ಹೊರಟು ಮಾರುತಿ ಅಲ್ಟೊ ಕಾರನ್ನು ಅಡ್ಡಾ ಗಟ್ಟಿ ನಿಲ್ಲಿಸಿ ತಪಾಸಣೆ ನಡೆಸಿದಾಗ 2 ಸಿಂಗಲ್ ಬ್ಯಾರಲ್ ಗನ್, ಒಂದು ಡಬಲ್ ಬ್ಯಾರಲ್ ಗನ್, ಒಂದು ಎರ್ ಗನ್, 26 ಗುಂಡುಗಳು, ಬೇಟೆಗೆ ಬಳಸುವ ಬ್ಯಾಟರಿ ಲೈಟ್‍ಗಳು ಹಾಗೂ ಸುಮಾರು 20 ಕೆಜಿಯಷ್ಟು ಕಾಡುಹಂದಿಯ ಮಾಂಸದ ತುಂಡುಗಳು ಪತ್ತೆಯಾಗಿವೆ.

     ಕಾಡುಹಂದಿ ಬೇಟೆ ಮಾಡಿರುವುದು ಖಚಿತವಾದ ಹಿನ್ನಲೆಯಲ್ಲಿ ಕಾರಿನಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ಗ್ರಾಮದ ಈಶ್ವರ್, ಕೃಷ್ಣೆಗೌಡ, ಪ್ರತಾಪ್ ಗೌಡ, ದೀಲಿಪ್, ರಾಕೇಶ್ ಅವರನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿಯಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಇಲ್ಲಿನ ಜೆಎಂಎಫ್‍ಸಿ ಸಿವಿಲ್ ನ್ಯಾಯಾಲಯಕ್ಕೆ ಬಂಧಿತರನ್ನು ಹಾಜರು ಪಡಿಸಿದ್ದಾರೆ.

     ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮೈಲಾರಪುರದ ಬಳಿ ತಾಯಿ ಮತ್ತು ಮರಿ ಕರಡಿಗಳು ವನ್ಯಜೀವಿ ಬೇಟೆಗಾರರ ಕೃತ್ಯಕ್ಕೆ ಬಲಿಯಾದ ಘಟನೆಯ ನಂತರ ಸಾರ್ವಜನಿಕರ ಆಕ್ರೋಶದಿಂದ ಅರಣ್ಯ ಇಲಾಖೆಯವರು ಎಚ್ಚೆತ್ತು ಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದವು.

      ತಾಲೂಕಿನಲ್ಲಿರುವ ಕಾಡುಗಳು ದಟ್ಟವಾಗಿಲ್ಲದ ಕಾರಣ ಬೇಟೆ ಸುಲಭವಾಗುತ್ತದೆ ಎನ್ನುವ ಕಾರಣದಿಂದ ಬೇರೆ ಜಿಲ್ಲೆಯ ಬೇಟೆಗಾರರು ಇಲ್ಲಿ ಕಳ್ಳ ಬೇಟೆ ನಡೆಸುತ್ತಿರುವ ವಿಚಾರ ಮುಂಚೆಯೆ ತಿಳಿದಿದ್ದರೂ ಕೂಡ ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ ಎನ್ನುವ ಆರೋಪ ಸ್ಥಳಿಯರದು.

     ಕಳೆದ ಒಂದು ವರ್ಷದಿಂದ ತಾಲೂಕಿನ ಕಾಡುಗಳಲ್ಲಿ ಕಳ್ಳ ಬೇಟೆ ಹೆಚ್ಚಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿತ್ತು. ವನ್ಯಜೀವಿಗಳ ಮಾರಣ ಹೋಮದ ನಂತರ ಎಚ್ಚೆತ್ತಿರುವ ಅರಣ್ಯ ಇಲಾಖೆ ಇನ್ನಾದರೂ ವನ್ಯಜೀವಿಗಳನ್ನು ರಕ್ಷಿಸುವ ಕೆಲಸ ಮಾಡಲಿ ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.ಈ ವೇಳೆ ಕಾರ್ಯಚರಣೆಯಲ್ಲಿ ಯೊಗೀಶ್,್ರ ಅರಣ್ಯ ರಕ್ಷಕ ರಾಘವೇಂದ್ರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap