ಟೋಕಿಯೋ
ಜಪಾನ್ ನಲ್ಲಿ ಸಾಂಕ್ರಾಮಿಕ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ ಎಂದು ಜಪಾನ್ ಸರ್ಕಾರ ಖಚಿತಪಡಿಸಿದೆ.ಜಪಾನ್ ಕೃಷಿ ಅರಣ್ಯ ಮತ್ತು ಮೀನುಗಾರಿಕೆ ಸಚಿವಾಲಯದ ಅನುಸಾರ, ಜನವರಿ ತಿಂಗಳಲ್ಲಿ ಛುಬು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಂಸ ಉತ್ಪನ್ನಗಳಲ್ಲಿ ಸಾಂಕ್ರಾಮಿಕ ರೋಗ ಕಂಡು ಬಂದಿತ್ತು ಎಂದು ತಿಳಿದು ಬಂದಿದೆ.
ವಿದೇಶದಿಂದ ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳಲ್ಲಿ ಹೆಚ್ಚಾಗಿ ಆಫ್ರಿಕನ್ ಹಂದಿ ಜ್ವರ ವೈರಸ್ ಕಂಡು ಬಂದಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಈ ವೈರಸ್ ಸಾಕು ಪ್ರಾಣಿ ಮತ್ತು ಕಾಡು ಹಂದಿಗಳ ಮೇಲೆ ಮಾತ್ರ ಪ್ರಭಾವ ಬೀರಲಿದ್ದು, ಇದು ಮನುಷ್ಯರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾನವ ಹಕ್ಕುಗಳ ಸಚಿವಾಲಯ ತಿಳಿಸಿದೆ.ಮಾಂಸದ ಉತ್ಪನ್ನಗಳನ್ನು ಸಾಗಿಸುವವರ ಕುರಿತು ಮಾಹಿತಿ ಕ್ರೋಡೀಕರಿಸಲಾಗುವುದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/gettyimages-456243122.gif)