ಬೆಂಗಳೂರು
ಬ್ಯಾಂಕ್‍ಮಿತ್ರ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಸಮಾನ ವೇತನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಬ್ಯಾಂಕ್‍ಮಿತ್ರ ಸಂಘದ ಕಾರ್ಯಕರ್ತರು ನಗರದಲ್ಲಿ ಎರಡನೇ ದಿನವಾದ ಇಂದೂ ಸಹ ಪ್ರತಿಭಟನೆ ನಡೆಸಿದರು.
ನಗರದ ಪುರಭವನ ಮುಂಭಾಗದಲ್ಲಿ ಗುರುವಾರ ಸೇರಿ ಪ್ರತಿಭಟನೆ ನಡೆಸಿದ ನೂರಾರು ಮಂದಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಗುತ್ತಿಗೆದಾರರ ಪದ್ಧತಿ ಕೈಬಿಡಬೇಕು, ಬ್ಯಾಂಕ್‍ಗಳಿಗೆ ನೇರವಾಗಿ ಬ್ಯಾಂಕ್‍ಮಿತ್ರರೊಡನೆ ವ್ಯವಹಾರ ನಡೆಸಬೇಕು. ಸಮಾನ ವೇತನ ಆಧಾರದಲ್ಲಿ ಎಲ್ಲ ಬ್ಯಾಂಕಿನ ಬ್ಯಾಂಕ್‍ಮಿತ್ರರಿಗೆ ಸಮಾನ ವೇತನ ನೀಡಬೇಕು. ಬ್ಯಾಂಕ್‍ಮಿತ್ರರ ಕೆಲಸವನ್ನು ಕ್ರಮಬದ್ಧಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








