ಹರಪನಹಳ್ಳಿ,
ಜಾತಿ ಜಾತಿ ಮದ್ಯೆ ಸಂಘರ್ಷ ಸೃಷ್ಠಿಸುವ ಬಿಜೆಪಿ ಪಕ್ಷಕ್ಕೆ ಮತ ಕೊಡಬೇಡಿ ಎಂದು ವಿದಾನಪರಿಷತ್ ಸದಸ್ಯ ಹಾಗೂ ,ಸಿಎಂ ಸಂಸದೀಯ ಕಾರ್ಯದರ್ಶಿ ಅಬ್ದುಲ್ ಜಬ್ಬಾರ ಅಲ್ಪಸಂಖ್ಯಾತ ಮತದಾರರಿಗೆ ಕರೆ ನೀಡಿದರು.
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ತಪ್ಪದೆ ಮತ ನೀಡಿ ಎಂದು ಅವರು ಮನವಿ ಮಾಡಿದರು.
ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದರೆ ಮಹಿಳೆಯರಿಗೆ ಶೇ.33 ರಷ್ಟು ಲೋಕಸಭೆಯಲ್ಲಿ ಮೀಸಲು ನಿಗದಿ ಪಡಿಸಲಾಗುವುದು ಎಂದ ಅವರು ಕಳೆದ 5 ವರ್ಷದಲ್ಲಿ ಪ್ರದಾನಿ ಮೋದಿ ಅವರು ಏನು ಅಭಿವೃದ್ದಿ ಮಾಡಿಲ್ಲ ಎಂದು ದೂರಿದರು.
ರೇಷ್ಮೆ ಉದ್ಯಮ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ ಮಾತನಾಡಿ ಕಳೆದ 15 ವರ್ಷದಲ್ಲಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಅವರು ಮಾಡಿದ ಸಾಧನೆ ಶೂನ್ಯ ಎಂದ ಅವರು ಇವರು ಮೋದಿ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಐಟಿ ಹಾಗೂ ಇಡಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಬಿಜೆಪಿಯವರು ಎಂದು ದೂರಿದ ಅವರು ಅಧಿಕಾರಿಗಳು ನೈತಿಕವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಮೋದಿ ಯವರು ದೇಶ ಇಬ್ಬಾಗ ಮಾಡುತ್ತಿದ್ದಾರೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಬಿಜೆಪಿವರು ಟಿಕೆಟ್ ನೀಡಿಲ್ಲ ಇದನ್ನು ಅಲ್ಪಸಂಖ್ಯಾತ ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ.ಶುಬಾಶ್ಚಂದ್ರ ಮಾತನಾಡಿ ಹಿಂದು ಎಂಬುದು ಧರ್ಮವಲ್ಲ, ಜೀವನದ ಒಂದು ಕ್ರಮ, ಆದರೆ ಬಿಜೆಪಿಯವರು ಹಿಂದು, ಮುಸ್ಲಿಂ ಎಂದು ಧರ್ಮ, ಜಾತಿ ಎಂದು ಒಡೆದು ಆಳುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಸಂವಿಧಾನಕ್ಕೆ ಅಪಾಯವಿದೆ, ಧ್ವೇಷ ಬಿತ್ತುವ, ಮನಸ್ಸುಗಳನ್ನು ಒಡೆಯುವ ರಾಜಕಾರಣ ಮಾಡುವವರಿಗೆ ಮತ ಹಾಕಬೇಡಿ ಎಂದು ಅವರು ಹೇಳಿದರು.
ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಜಿಲ್ಲಾ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಪುರಸಭಾ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ ಅಧ್ಯಕ್ಷೆ ಎಂ.ಪಿ.ವೀಣಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿ.ಪಂ ಸದಸ್ಯ ಎಚ್ .ಬಿ. ಪರಶುರಾಮಪ್ಪ, ವಕೀಲ ವೆಂಕಟೇಶ, ಹಲಗೇರಿ ಮಂಜಪ್ಪ, ಇರ್ಪಾನ, ರಿಯಾಜ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಕೀರ್ ಬೆಣ್ಣಿಹಳ್ಳಿ, ಸಿರಾಜ, ತಿಪ್ಪೇಶ, ಚಿಕ್ಕೇರಿ ಬಸಪ್ಪ, ಉದಯಶಂಕರ, ಅರಸಿಕೇರಿ ಸಲಾಂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
