ಎಂ ಎನ್ ಕೋಟೆ :
ಸುಮಾರು 3ಕೋಟೆ 16ಲಕ್ಷ ವೆಚ್ಚದಲ್ಲಿ ಡಾಂಬರಿಕರಣಕ್ಕೆ ಗುದ್ದಲಿ ಪೂಜೆ ಮಾಡಲಾಗುತ್ತಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಸೋಮಲಾಪುರ ಮಜರೆ ತೋಟದಪಾಳ್ಯದಿಂದ ಜೈನಿಗರನಹಳ್ಳಿ ಗ್ರಾಮದಿಂದ ತಿಪ್ಪೂರುಪಾಳ್ಯ , ತಿಗಳರಪಾಳ್ಯದಲ್ಲಿ ಗುದ್ದಲಿಪೂಜೆ ಸಲ್ಲಿಸಿ ಮಾತನಾಡಿದ ಅವರು ಗುತ್ತಿದಾರರು ಕಳೆಪೆ ಕಾಮಾಗಾರಿ ಮಾಡದೇ ಗುಣ ಮಟ್ಟದ ರಸ್ತೆಗಳನ್ನು ಮಾಡಬೇಕು.ಸಮಿಶ್ರ ಸರ್ಕಾರ ಉತ್ತಮ ಆಡಳಿತ ನಿರ್ವಹಿಸುತ್ತಿದೆ.
ಸಾರ್ವಜನಿಕ ಸಹಕಾರ ಅಗತ್ಯ ಗುತ್ತಿಗೆದಾರರು ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಪ್ರಾಮಾಣಿಕವಾಗಿ ಸರ್ಕಾರದ ಹಣವನ್ನು ಸದುಪಯೋಗವನ್ನು ಪಡೆದುಕೋಳ್ಳಬೇಕು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಅಬಿವೃದ್ಧಿಗೆ ಸಾಕಷ್ವು ಅನುದಾನ ಬಿಡುಗಡೆಯಾಗುತ್ತಿದ್ದು ಸ್ವಚ್ಚತೆ ಕಾಂಪಾಡಲು ಚರಂಡಿ ವ್ಯವಸ್ಥೆ ಸಿಸಿ ರಸ್ತೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ.ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ಮಾಡಬೇಕು.ತಮಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಗೊಂದಲಗಳನ್ನು ಮಾಡಿಕೊಳ್ಳದೆ ಚರಂಡಿಗಳನ್ನು ನಿರ್ಮಿಸಿ ಸರ್ಕಾರದ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗುಬ್ಬಿ ತಾಲ್ಲೂಕಿನ ಮಠ ಗಂಗಯ್ಯನಪಾಳ್ಯ ಹಾಗೂ ದೇವರಹಳ್ಳಿ , ಮಂಚಲದೊರೆ ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ಈಗಾಗಲೇ ಮುಖ್ಯಮಂತ್ರಿಗಳ ಜೂತೆ ಮಾತನಾಡಿದ್ದೇನೆ ಕ್ಯಾಬಿನೆಟ್ ನಲ್ಲಿ ಕೂಡ ಚರ್ಚೆ ಆಗಿದೆ ಅದಷ್ವು ಬೇಗನೆ ನೀರು ಬಿಡುವ ಕೆಲಸವನ್ನು ಮಾಡಲಾಗುತ್ತದೆ.ಎಂದರು.
ಸಮಿಶ್ರ ಸರ್ಕಾರ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಕೊಟ್ಟರು ಮಾಡಬೇಕು. ಕಾಂಗ್ರೇಸ್ ಗೆ ಕೊಟ್ಟರು ಮಾಡಬೇಕಾಗಿದೆ. ಹೈಕಮಾಂಡ್ ಏನು ತಿರ್ಮಾನ ಕೈಗೊಳುತ್ತದೆ. ಅದಕ್ಕೆ ನಾವು ಬದ್ದರಾಗಬೇಕು.ಸಮಿಶ್ರ ಸರ್ಕಾರ ಆಡಳಿತ ಇರುವುದಿಂದ ಕಾರ್ಯಕರ್ತರಲ್ಲಿ ಗೊಂದಲವಿಲ್ಲ ಹೈಕಮಾಂಡ್ ಯಾರಿಗೂ ಕೊಟ್ಟರು ಸಹ ನಮ್ಮ ಕಾರ್ಯಕರ್ತರು ಸಿದ್ದರಾಗಿದ್ದಾರೆ ಎಂದು ತಿಳಿಸಿದರು.
ಸಿಎಂ ವಿರುದ್ದ ನಾನು ಬೇಜರಾಗಿದ್ದು ನಿಜ ನನ್ನ ಕ್ಷೇತ್ರಕ್ಕೆ ನಾನು ದೊಡ್ಡ ಕೊಡುಗೆ ಇಟ್ಟುಕೊಂಡಿದ್ದೇ ಆದರೆ ಬಜೆಟ್‍ನಲ್ಲಿ ನಿರೀಕ್ಷೆಯಷ್ವು ಸಿಗಲಿಲ್ಲ ಮುಖ್ಯಮಂತ್ರಿಗಳಿಗೆ ಗೊತ್ತಿದೆ.ಈಗಾಗಲೇ ಸಮಸ್ಯೆಗಳ ನಿವಾರಿಸುವ ಭರವಸೆ ನೀಡಿದ್ದಾರೆ. ನಾನು ಮೇಜರ್ ನನ್ನ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದೇ ನನ್ನ ಗುರಿಯಾಗಿದೆ.ಮುಖ್ಯಮಂತ್ರಿಗಳು ಇದಕ್ಕೆ ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್ , ಸಿದ್ದಗಂಗಯ್ಯ ,ದೇವರಾಜು ವಿ ಎಸ್ ಎಸ್ ಎನ್ ಅದ್ಯಕ್ಷ ಶಿವರುದ್ರಯ್ಯ , ಮಾಜಿ ಅಧ್ಯಕ್ಷ ಕೃಷ್ಠಮೂರ್ತಿ , ಪಿಡಿಓ ಸಿ, ನಾಗೇಂದ್ರ ಮುಖಂಡರಾದ ಗಂಗರಾಜು , ಎಂ ಎಲ್ ಶಿವಕುಮಾರ್ , ಗುತ್ತಿಗೆದಾರ ಮನೋಜ್ , ಸೋಮನಾಥ್ ಹಾಗೂ ಗ್ರಾಮಸ್ಥರು ಭಾಗಬಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
