ಹರಿಹರ:
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡುವಲ್ಲಿ ಪ್ರವಿಫಲವಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಸಾರ್ವತ್ರಿಕ ಚುನಾವಣೆ ತಾಲ್ಲೂಕು ಉಸ್ತುವಾರಿ ಹೊತ್ತಿರುವ ನೀರಾ ಪ್ರಭಾಕರ್ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶಕ್ಕೆ ಯಾವುದೇ ಸಮಾಜಮುಖಿ ಕೆಲಸವನ್ನು ಮಾಡುವಲ್ಲಿ, ಜನರಿಗೆ ಸುಳ್ಳು ಬರವಸೆಗಳನ್ನು ನೀಡಿವುದರ ಮೂಲಕ ಆಸೆ ಹುಟ್ಟಿಸುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷದವರು ಕಳೆದ 2014 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರಿಗೆ ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತಂದು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಜಮಾ ಮಾಡುವುದಾಗಿ ಹೇಳಿ ಈಗ ಯಾವುದೇ ಹಣ ಜಮಾ ಮಾಡಿಲ್ಲ ಎಂದು ತಿಳಿಸಿದರು.
ಪ್ರತಿ ವರ್ಷ ದೇಶದಲ್ಲಿರುವ ನಿರುದ್ಯೋಗಿಗಳಿಗೆ ಎರಡು ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ ಈಗ ನಿರುದ್ಯೋಗಿಗಳಿಗೆ ಯಾವುದೇ ಉದ್ಯೋಗ ಕೊಡಿಸುವಲ್ಲಿ ವಿಫಲರಾಗಿದ್ದು, ಮತ್ತು ನೋಟ್ ಅಮಾನ್ಯೀಕರಣ ಮಾಡಿ ಯಾವುದೇ ಬಡವರಿಗೆ ನ್ಯಾಯ ನೀಡದೆ ಬರೀ ಬಂಡವಾಳ ಶಾಹಿಗಳು, ಉದ್ಯಮಿಗಳಿಗೆ ಅನುಕೂಲ ಮಾಡಿರುತ್ತಾರೆ ಈ ವೇಳೆ ಸುಮಾರು 115 ಜನ ಬಡವರು ಮರಣ ಹೊಂದಿರುತ್ತಾರೆ.
ಆದ್ದರಿಂದ ಈ ಸಾರಿಯ ಚುನಾವಣೆಯಲ್ಲಿ ಯಾರೂ ಸಹ ಬಿಜೆಪಿಗೆ ಮತ ನೀಡಬಾರದು ಎಂದು ಹೇಳಿದರು.ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಆರ್.ಅಥಾಉಲ್ಲಾ ಖಾನ್ ಮಾತನಾಡಿ ನಾಳೆ ಭಾನುವಾರ ಸಂಜೆ 5ಗಂಟೆಗೆ ನಗರದ ಕಾಟ್ವೆ ಭವನದಲ್ಲಿ ತಾಲ್ಲೂಕು ಅಸಂಘಟಿತ ಕಾರ್ಮಿಕರ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷರಾದ ಡಾ.ಶಾಂತವೀರ ನಾಯಕ್ ಆಗಮಿಸುತ್ತಾರೆ ಮತ್ತು ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಲಿದ್ದಾರೆ.
ಅತಿಥಿಗಳಾಗಿ ಮಾಜಿ ಸಚಿವ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಶಾಸಕ.ಎಸ್.ರಾಮಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಅಧ್ಯಕ್ಷ ಎಚ್.ಬಿ.ಮಂಜಪ್ಪ,ನಂಜಾ ನಾಯ್ಕ,ದಿನೇಶ್.ಕೆ.ಶೆಟ್ಟಿ,ಡಿ.ಬಸವರಾಜ್,ಸಿರಾಜ್ ಶೇಖ್,ಮಲೆಬೆನ್ನೂರು-ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬಿದಾಲಿ.ಎಲ್.ಬಿ.ಹನುಮಂತಪ್ಪ,ತಾಲೂಕು ಅಲ್ಪಸಂಖ್ಯಾತ ಕಮಿಟಿ ಹಾಗೂ ಕಾಂಗ್ರೆಸ್ ವಿವಿಧ ಘಟಕಗಳ ಅಧ್ಯಕ್ಷರುಗಳು ಚುನಾಯಿತ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ,ತಾಲ್ಲೂಕು ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎನ್.ದಿಲೀಪ್ ಕುಮಾರ್,ಕೆ.ಎ.ಪ್ರಕಾಶಯ್ಯ,ಎಂ.ಎಸ್.ಹಾಲೇಶ್ ಮುಂತಾದವರು ಉಪಸ್ಥಿತರಿದ್ದರು.