ಚಳ್ಳಕೆರೆ
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ವಯೋವೃದ್ದೆಯರನ್ನು ಹಿಂಬಾಲಿಸಿ ಚಾಣಾಕ್ಷತದನಿಂದ ಬಂಗಾರದ ಸರವನ್ನು ಅಪಹಣರ ಮಾಡುವ ಕೃತ್ಯಗಳು ಪ್ರಾರಂಭವಾಗಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗಿದೆ.
ತ್ಯಾಗರಾಜ ನಗರದ ನಿವಾಸಿ ಗಂಗಮ್ಮ(80) ಎಂಬುವವರು ಶನಿವಾರ ಮಧ್ಯಾಹ್ನ ಸುಮಾರು 12ರ ಸಮಯದಲ್ಲಿ ತಮ್ಮ ಮನೆಯ ಮುಂದೆ ನಿಂತಿದ್ದಾಗ ಮೋಟಾರ್ ಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂದಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ ವೃದ್ದೆಯ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಸುಮಾರು 1.20 ಲಕ್ಷ ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡು ಬೈಕ್‍ನಲ್ಲಿ ಪರಾರಿಯಾಗಿರುತ್ತಾರೆ.
ಘಟನೆಯಿಂದ ಗಾಬರಿಗೊಂಡ ಗಂಗಮ್ಮ ಕೂಗಿಕೊಂಡಾಗ ನೆರೆಯವರು ದಾವಿಸಿ ಬಂದರಲ್ಲದೆ, ಅಲ್ಲಿಯೇ ಸ್ವಲ್ಪ ದೂರವಿದ್ದ ಯುವಕರ ಗುಂಪೊಂದು ಮೋಟಾರ್ ಬೈಕ್ ಬೆನ್ನತ್ತಿದರೂ ಸಹ ಬೈಕ್ ಚಿತ್ರದುರ್ಗದ ಕಡೆ ವೇಗವಾಗಿ ಹೋಗಿದೆ ಎನ್ನಲಾಗಿದೆ. ಸುದ್ದಿ ತಿಳಿದ ಕೂಡಲೇ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಸ್ಥಳಕ್ಕೆ ಭೇಟಿ ನೀಡಿಗಂಗಮ್ಮನವರನ್ನು ಅಪರಿಚಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಬೈಕ್ ಬೆನ್ನತ್ತಿದ ಯುವಕರೊಂದಿಗೂ ಸಹ ಚರ್ಚೆ ನಡೆಸಿದರು. ಪಿಎಸ್‍ಐ ಕೆ.ಸತೀಶ್‍ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದು, ಮೋಟಾರ್ ಬೈಕ್ ಆಂಧ್ರ ಪ್ರದೇಶದ ನೊಂದಣಿ ಹೊಂದಿತ್ತು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ