ಮತದಾನ ನಮ್ಮೆಲ್ಲರ ಪ್ರವಿತ್ರ ಕರ್ತವ್ಯವಾಗಿದೆ : ನಫೀಜಾಬೇಗಂ

ಹಿರಿಯೂರು :

     ಮತದಾನ ನಮ್ಮೆಲ್ಲರ ಪ್ರವಿತ್ರ ಕರ್ತವ್ಯವಾಗಿದ್ದು, ಪ್ರತಿಯೊಬ್ಬರು ಈ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ಮೂಲಕ ಈ ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರ್ ನಫೀಜಾಬೇಗಂ ಕರೆ ನೀಡಿದರು.

     ನಗರದ ಸಂಗೊಳ್ಳಿರಾಯಣ್ಣ ಸರ್ಕಲ್‍ನಲ್ಲಿ ಮತದಾನ ಜಾಗೃತಿ ಆಂಗವಾಗಿ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ಬೈಕ್ ರ್ಯಾಲಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

       ತಾಲ್ಲೂಕು ಸರ್ಕಾರಿ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಇದೇ ಏಪ್ರಿಲ್ 18 ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಮತದಾನ ನಮ್ಮೆಲ್ಲರ ಹಕ್ಕು ಎಂದರಲ್ಲದೆ “ನಮ್ಮ ಮತ ನಮ್ಮ ಹಕ್ಕು” ಎಂಬುದಾಗಿ ಘೋಷಣೆಗಳನ್ನು ಕೂಗಿ ಮತದಾರಲ್ಲಿ ಜಾಗೃತಿ ಮೂಡಿಸಿದರು.

       ಈ ಕಾರ್ಯಕ್ರಮದಲ್ಲಿ ಸರ್ಕಾರಿನೌಕರರಸಂಘ ಗೌ||ಅಧ್ಯಕ್ಷ ಎಂ.ಜಿ.ಗೋಪಾಲ್, ಕಾರ್ಯದರ್ಶಿ ದೇವರಾಜ್, ಶಿಕ್ಷಣಇಲಾಖೆ ಶಿಕ್ಷಣಸಂಯೋಜಕರಾದ ಶಶಿಧರ್, ಪ್ರಾಥಮಿಕ ಶಾಲಾ ಶಿಕ್ಷಕರಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ್, ತಾಲ್ಲೂಕು ಅಧ್ಯಕ್ಷ ಹನುಮಂತರೆಡ್ಡಿ, ಮತ್ತು ಪದಾಧಿಕಾರಿಗಳಾದ ಮಂಜುನಾಥ್, ಶ್ರೀಧರ್, ಕೃಷ್ಣಮೂರ್ತಿ, ನಾಗಭೂಷಣ್, ವೀರೇಶ್ ಹಾಗೂ ನೌಕರರ ಸಂಘದ ಪದಾಧಿಕಾರಿಗಳಾದ ಜಿ.ಏಕಾಂತಪ್ಪ, ಪರಮೇಶ್ವರಪ್ಪ, ನಟರಾಜ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap