ಕೊರಟಗೆರೆ
ದೇಶದ್ರೋಹಿ ಅಬ್ಜಲ್‍ಗುರುವಿನ ಜನ್ಮದಿನ ಆಚರಣೆ ಮಾಡುವ ರಾಹುಲ್‍ಗಾಂಧಿ ಮತ್ತು ದೇಶ ವಿಭಜನೆಯ ಭಾಷಣ ಮಾಡುವ ಫಾರೂಕ್‍ಅಬ್ದುಲ್ಲಾ ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸ್ನೇಹವಿರುವ ಮೈತ್ರಿ ಪಕ್ಷಕ್ಕೆ ರಾಜ್ಯದ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ಪಕ್ಷದ ರಾಜ್ಯ ವಕ್ತಾರ ಗೋ. ಮಧುಸೂದನ್ ಕರೆ ನೀಡಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲ್ಲಿ ಬಿಜೆಪಿ ಕೊರಟಗೆರೆ ಘಟಕದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಭಯೋತ್ಪಾದಕ ಮನೋಭಾವನೆಯುಳ್ಳ ಪಾಕಿಸ್ತಾನದ ಪರ ಧೊರಣೆ ತಾಳುವ ಕಾಂಗ್ರೆಸ್‍ಗೆ ಮತ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ವಿಶ್ವ ನಾಯಕನಾಗಿ ಬೆಳೆಯುತ್ತಿರುವ ನರೇಂದ್ರ ಮೋದಿಯನ್ನು ಲೋಕಸಭಾ ಚುನಾವಣೆಯಲ್ಲಿ ಎದುರಿಸಲು ಶಕ್ತಿಯಿಲ್ಲದ ಕಾಂಗ್ರೆಸ್ ಪಕ್ಷದೇಶದ ಭದ್ರತೆಯ ರಫೇಲ್‍ಯುದ್ದ ವಿಮಾನ ಖರೀದಿ ವಿಚಾರದಲ್ಲಿ ತಲೆಹಾಕಿ ವಿನಾಕಾರಣ ಸುಳ್ಳು ಆರೋಪ ಮಾಡಿ ಸುಪ್ರೀಂಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ರಾಹುಲ್ ಹಾರಿಸಿದ ರಫೇಲ್‍ನ ಆರೋಪ ವಾಯು ನೆಲೆಯಲ್ಲಿ ಸುಟ್ಟು ಭಸ್ಮವಾಗಿ ಹೋಗಿದೆ ಎಂದು ತಿಳಿಸಿದರು.
2019-20ನೇ ಸಾಲಿನ ಲೋಕಸಭಾ ಚುನಾವಣೆ ದೇಶ ಭಕ್ತರ ಮತ್ತು ದೇಶ ದ್ರೋಹಿಗಳ ನಡುವೆ ನಡೆಯುತ್ತಿರುವ ನಿಜವಾದ ಚುನಾವಣೆ ಆಗಿದೆ. ದೇಶದ ಗುಟ್ಟನ್ನು ಬೇರೆ ದೇಶಕ್ಕೆ ಬಿಟ್ಟು ಕೊಡುವುದು, ದೇಶದ ಸಮಗ್ರತೆ, ಏಕತೆಗೆ ದಕ್ಕೆ ತರುವುದು ಹಾಗೂ ದೇಶದಲ್ಲಿದ್ದುಕೊಂಡು ಶತು ರಾಷ್ಟ್ರಕ್ಕೆ ಸಹಾಯ ಮಾಡುವುದು ದೇಶದ್ರೋಹದ ಕೆಲಸವಲ್ಲವೆ ಎಂದು ಮೈತ್ರಿ ಪಕ್ಷದ ವಿರುದ್ದ ಕಿಡಿಕಾರಿದರು.
ನರೇಂದ್ರ ಮೋದಿಯ ಸುನಾಮಿ ಅಲೆಯಲ್ಲಿ ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನಖರ್ಗೆ, ಚಿಕ್ಕಬಳ್ಳಾಪುರದ ವೀರಪ್ಪಮೊಯ್ಲಿ, ಕೋಲಾರ-ಮುನಿಯಪ್ಪ, ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಮಂಡ್ಯದ ಸ್ವಾಭಿಮಾನಿ ಅಭ್ಯರ್ಥಿ ಸುಮಾಲತಾ ಗೆಲುವಿನ ಜೊತೆ ರಾಜ್ಯದಲ್ಲಿ 23 ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ಮುಸುಕಿನ ಗುದ್ದಾಟ ಅಷ್ಟು ಸುಲಭವಾಗಿ ಕೊನೆ ಆಗುವುದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಆಗಿರುವುದು ನೀವೆಲ್ಲರೂ ನಂಬಲೇ ಬೇಕಾದ ಕಟು ಸತ್ಯವಾಗಿದೆ. ದೇಶದಲ್ಲಿ ಬಿಜೆಪಿ 325 ಸ್ಥಾನ ಗೆಲುವಿನ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿ ಆದ ವಾರದೊಳಗೆ ರಾಜ್ಯದ ಮೈತ್ರಿ ಸರಕಾರ ಪತನ ಆಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮುಖ್ಯಮಂತ್ರಿ ಕಾರ್ಯಾಲಯ ಕಳೆದ ನಾಲ್ಕು ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡದೇ 13 ಸಾವಿರ ಕೋಟಿಯ ಚೆಕ್ ವಿತರಣೆ ಮಾಡಿರುವ ಮಾಹಿತಿ ಬಗ್ಗೆ ಐಟಿ ಇಲಾಖೆಗೆ ಲಭ್ಯವಾಗಿದೆ. ಬ್ಯಾಂಕಿನಲ್ಲಿ ಹಣ ಬಿಡುಗಡೆ ಮಾಡಿಕೊಳ್ಳುತ್ತಿರುವ ಗುತ್ತಿಗೆದಾರರ ಮೇಲೆ ಐಟಿ ಇಲಾಖೆ ದಾಳಿ ನಡೆಸುತ್ತಿದೆ. ಕಳ್ಳರಿಗೆ ಮಾತ್ರ ಐಟಿ ಇಲಾಖೆಗೆ ಭಯ ಕಾಡುತ್ತಿದೆ. ಸಾರ್ವಜನಿಕರ ದುಡ್ಡನ್ನು ಕೊಳ್ಳೆ ಒಡೆಯುವ ಕೆಲಸವನ್ನು ಮೈತ್ರಿ ಸರಕಾರ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಮಂಡ್ಯದ ರಾಜಕಾರಣ ಕರ್ನಾಟಕ ರಾಜ್ಯಕ್ಕೆ ದಿಕ್ಸೂಚಿ ಆಗಿದೆ. ಸ್ವಾಭಿಮಾನಿ ಮಹಿಳೆಯ ಮೇಲೆ 8 ಜನ ಶಾಸಕರು, 3 ಜನ ಸಚಿವರು ಮತ್ತು ಹಾಲಿ ಮತ್ತು ಮಾಜಿ ಮುಖ್ಯಮಂತ್ರಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕನ ಮಾತಿನ ವೈಖರಿಯನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಹಾಸನ, ಮಂಡ್ಯ ಮತ್ತು ತುಮಕೂರಿನ ಮೈತ್ರಿ ಅಭ್ಯರ್ಥಿಗಳು ಸೋತು ಕುಟುಂಬ ರಾಜಕಾರಣ ಕೊನೆ ಆಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪವನಕುಮಾರ್ ಮುಖಂಡರಾದ ಗೋಪಾಲರಾವ್, ಹನುಮಂತರಾಜು, ಪ್ರಸನ್ನ, ರವಿಕುಮಾರ್, ಪ್ರಕಾಶರೆಡ್ಡಿ, ಮಂಜುನಾಥ, ಗೋವಿಂದ, ರಂಗನಾಥ, ಪ್ರಸಾದ್, ಗುರುದತ್ ಸೇರಿದಂತೆ ಇತರರು ಇದ್ದರು.