ಹರಪನಹಳ್ಳಿ:
ಭಾನುವಾರ ಸಂಜೆ ಸುರಿದ ಮಳೆ-ಗಾಳಿಗೆ ತಾಲ್ಲೂಕಿನಲ್ಲಿ ಅಪಾರ ಹಾನಿ ಸಂಭವಿಸಿದ್ದು, ತಾಲ್ಲೂಕಿನ ತಾವರಗುಂದಿ, ಕಂಡಿಕೆರೆ ತಾಂಡಾ ಹಾಗೂ ನಿಟ್ಟೂರು, ಮತ್ತೂರು, ಗ್ರಾಮಗಳ ಕೆಲ ಮನೆಗಳಿಗೆ ಹಾನಿ ಸಂಭವಿಸಿದೆ.
ತಾವರಗುಂದಿ, ಕಂಡಿಕೆರೆ ತಾಂಡಾದಲ್ಲಿ ತಲಾ ಒಂದು, ಹಲವಾಗಲು ಗ್ರಾಮದಲ್ಲಿ 4, ನಿಟ್ಟೂರು ಹಾಗೂ ಮತ್ತೂರು ಗ್ರಾಮಗಳಲ್ಲಿ 15 ತಗಡಿನ ಮನೆಗಳು ಜಖಂಗೊಂಡಿವೆ. ಹಲವಾಗಲು, ನಿಟ್ಟೂರು ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ಭತ್ತ ತೆನೆ ಸಮೇತ ನೆಲೆಕ್ಕಚ್ಚಿದೆ. ಕೆಲವಡೆ ಮರಗಳಿಗೂ ಹಾನಿ ಉಂಟಾಗಿದೆ.
ಮಳೆ ಪ್ರಮಾಣ: ತಾಲ್ಲೂಕಿನ ವಿವಿಧೆಡೆ ಸೋಮವಾರ ಸುರಿದ ಮಳೆ ಪ್ರಮಾಣ ಹೀಗಿದೆ. ಹರಪನಹಳ್ಳಿ 14.6 ಮೀ.ಮಿ., ಚಿಗಟೇರಿ 30.8., ತೆಲಗಿಯಲ್ಲಿ 6.9 ಮೀ.ಮೀ ಮಳೆ ಆಗಿರುವ ಬಗ್ಗೆ ವರದಿ ಆಗಿದೆ. ಅರಸೀಕೆರೆ, ಹಿರೇಮೆಗಳಗೆರೆ, ಉಚ್ಚಂಗಿದುರ್ಗ ಹಾಗೂ ಹಲವಾಗಲು ಪ್ರದೇಶದಲ್ಲಿ ಮಳೆ ಬಿದ್ದಿರುವ ಬಗ್ಗೆ ವರದಿ ಆಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
