ದೊಡ್ಡಗೌಡರನ್ನು ಭೇಟಿ ಮಾಡಿದ ಸಿ ಎಂ

ಬೆಂಗಳೂರು :

         ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರುಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಭಾರಿಕುತೂಹಲ ಕೆರಳಿಸಿದೆ.

         ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ನಿನ್ನೆ ಬೆಳಗ್ಗೆ 10.30 ರ ಸುಮಾರಿಗೆ ಆಗಮಿಸಿದ ಕುಮಾರಸ್ವಾಮಿ ಅವರು, ಸುಮಾರು, ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು.

         ಮೊನ್ನೆಯೂ ಸಹ ಗೌಡರ ನಿವಾಸಕ್ಕೆ ಆಗಮಿಸಿದ್ದ ಸಿಎಂ, ಲೋಕಸಭೆ ಚುನಾವಣೆಗೆ ತಯಾರಿ, ಪಕ್ಷದ ಸಂಘಟನೆ ಮತ್ತು ಸೀಟು ಹಂಚಿಕೆ ಕುರಿತು ಚರ್ಚೆ ನಡೆಸಿದ್ದರು.ಜೆಡಿಎಸ್ ಪಾಲಿನ ನಿಗಮ ಮಂಡಳಿ, ಸಂಸದೀಯ ಕಾರ್ಯದರ್ಶಿ ಮತ್ತಿತರ ಹುದ್ದೆ ಗಳು ಇನ್ನುತುಂಬಿಲ್ಲ. ಆದರೆ, ಕಾಂಗ್ರೆಸ್ ಈಗಾಗಲೇ ತನ್ನ ಪಾಲಿನ ನಿಗಮ ಮಂಡಳಿ, ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ನೇಮಕಮಾಡಿ ತಿಂಗಳು ಕಳೆದಿದೆ. ಜೆಡಿಎಸ್ ನಾಯಕರಲ್ಲಿ ನಿಗಮ ಮಂಡಳಿ ನೇಮಕಕ್ಕೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕುರಿತು ಗೌಡರ ಜೊತೆ ಚರ್ಚೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

       ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ಮಂಡ್ಯ ಹಾಸನ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಹಗ್ಗಜಗ್ಗಾಟ ನಡೆಸುತ್ತಿರುವ ಕಾಂಗ್ರೆಸ್- ಜೆಡಿಎಸ್ ನಾಯಕರಲ್ಲಿ ಇದುವರೆಗೂ ಒಮ್ಮತ ಮೂಡಿಲ್ಲ. ಉಪಚುನಾವಣೆಯಲ್ಲಿ ಮಂಡ್ಯ ಬಿಟ್ಟುಕೊಟ್ಟಿದ್ದಕಾಂಗ್ರೆಸ್ ಈ ಬಾರಿ ಬಿಡುವುದಕ್ಕೆ ಆಗುವುದಿಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿರುವುದು ಜೆಡಿಎಸ್ ನಾಯಕರಲ್ಲಿ ಆತಂಕ ಮೂಡಿಸಿದೆ. ಜೊತೆಗೆ ಸುಮಲತಾ ಅಂಬರೀಶ್ – ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಕೂಡ ಜೆಡಿಎಸ್ಗೆ ನುಂಗಲಾರದ ತುತ್ತಾಗಿದೆ.

       ಸೀಟು ಹಂಚಿಕೆಕುರಿತು ಈಗಾಗಲೇ ದೇವೇಗೌಡರು ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್‍ ಜೊತೆ ಪ್ರಾಥಮಿಕ ಹಂತದಚರ್ಚೆ ನಡೆಸಿದ್ದು, ಮಾತುಕತೆ ಫಲಪ್ರದವಾಗಿಲ್ಲ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‍ ಉಸ್ತುವಾರಿ ವೇಣುಗೋಪಾಲ್‍ ಅವರೊಂದಿಗೆ ನಿನ್ನೆ ಚರ್ಚೆ ನಡೆಸಲು ಅವರು ತೀರ್ಮಾನಿಸಿದ್ದರು. ಆದರೆ, ಮೊನ್ನೆ ತಡರಾತ್ರಿ ರಾಜಧಾನಿಗೆ ಬಂದಿಳಿದ ವೇಣುಗೋಪಾಲ್‍ ನಿನ್ನೆ ಮುಂಜಾನೆ ದಿಢೀರ್ ವಾಪಸಾಗಿರುವುದು ಕೂಡ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಮುಂದೇನು ಮಾಡಬೇಕು ಎಂಬ ಕುರಿತು ಉಭಯ ನಾಯಕರು ಚಿಂತನೆ ನಡೆಸುತ್ತಿದ್ದಾರೆ.

       ದೇವೇಗೌಡರನ್ನು ಭೇಟಿ ಮಾಡಿದ ನಂತರ ಸಿಎಂ ಚಿಕ್ಕಬಳ್ಳಾಪುರ ಪ್ರವಾಸಕೈಗೊಂಡಿದ್ದು, ಅಲ್ಲಿ ಸ್ಥಳೀಯ ಮುಖಂಡರೊಂದಿಗೆ ಲೋಕಸಭೆ ಚುನಾವಣೆ ಸಂಬಂಧಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap