ಬೆಂಗಳೂರು
ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಬೈಕ್‍ನಲ್ಲಿ ವೇಗವಾಗಿ ಹೋಗಿ ಡಿಕ್ಕಿ ಹೊಡೆದು ಬಿಬಿಎ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿ ಮತ್ತೊಬ್ಬರು ಗಾಯಗೊಂಡಿರುವ ದುರ್ಘಟನೆ ಚಿಕ್ಕಜಾಲ ಸಂಚಾರ ಪೊಳೀಸ್ ಠಾಣಾ ವ್ಯಾಪ್ತಿಯ ಹೆಗಡೆ ನಗರದ ನಾರಾಯಣಪುರ ಸಿಗ್ನಲ್‍ನಲ್ಲಿ ಸಂಭವಿಸಿದೆ.
ಹೆಗಡೆ ನಗರದ ಕರ್ನಾಟಕ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಉತ್ತರ ಪ್ರದೇಶದ ಜಾನ್ಸಿ ಮೂಲದ ಫೈಜ್ ಖಾನ್ (22)ಎಂದು ಮೃತಪಟ್ಟ ವಿದ್ಯಾರ್ಥಿನಿಯನ್ನು ಗುರುತಿಸಲಾಗಿದೆ. ಆಕೆಯ ಜೊತೆಗಿದ್ದ ರಾಜಸ್ತಾನ ಮೂಲದ ಮತ್ತೊಬ್ಬ ವಿದ್ಯಾರ್ಥಿ ಕಮಲ್ (22) ಗಾಯಗೊಂಡಿದ್ದಾರೆ.
ಫೈಜ್ ಖಾನ್ ಅವರು ಕಮಲ್ ಬೈಕ್‍ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿಕೊಂಡು ಗುರುವಾರ ಮಧ್ಯರಾತ್ರಿ 1.50ರ ವೇಳೆ ಕಾಲೇಜಿನ ಪಿಜಿ ಹಾಸ್ಟೆಲ್‍ಗೆ ಬೈಕ್‍ನಲ್ಲಿ ಹಿಂತಿರುಗುತ್ತಿದ್ದಾಗ ನಾರಾಯಣಪುರ ಸಿಗ್ನಲ್ ಬಳಿ ಲಾರಿಯನ್ನು ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








