ಹೊಸದುರ್ಗ:
ಶ್ರೀರಾಂಪುರ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀ.ಡಿ.ಕೆ. ಸಂತೋಷ್‍ಕುಮಾರ್‍ರವರು ಠಾಣೆಯಲ್ಲಿರುವಾಗ ಹೆಗ್ಗೆರೆ ಗ್ರಾಮದ ಬಳಿ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಲ್ಲಿ ಟ್ರಾಕ್ಟರ್‍ನಲ್ಲಿ ಮರಳನ್ನು ತುಂಬಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೋಗುತ್ತಿರುತ್ತಾನೆ ಎಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿಯವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಕಳ್ಳತನದಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ನಂ.ಕೆ.ಎ.13-ಟಿ-8376 ನೇ ಟ್ರಾಕ್ಟರನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.