ಶಿರಾ
ಮಾರುತಿ ಎರಿಟಿಕಾ ಕಾರೊಂದು ಹೆದ್ದಾರಿಯಲ್ಲಿನ ಡಿವೈಡರ್ ಹತ್ತಿ ಪಕ್ಕದ ರಸ್ತೆಗೆ ನುಗ್ಗಿ ಮುಂಭಾಗದಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಒಡೆದ ಪರಿಣಾಮ ಇಬ್ಬರು ಎಂಜಿನಿಯರ್‍ಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರ ಠಾಣಾ ವ್ಯಾಪ್ತಿಯ ಶಿವಾಜಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಬೆಂಗಳೂರು ಮೆಡಿಕಲ್ ಕಾಲೇಜಿನ ಐದು ಮಂದಿ ವಿದ್ಯಾರ್ಥಿಗಳು ಮಾರುತಿ ಎರಿಟಿಕಾ ಕಾರಿನಲ್ಲಿ ಬೆಂಗಳೂರಿನಿಂದ ಸಿರ್ಸಿಗೆ ತೆರಳುತ್ತಿದ್ದಾಗ, ಶಿರಾ ನಗರಕ್ಕೆ ಸಮೀಪದ ಶಿವಾಜಿ ನಗರದ ಬಳಿ ಸದರಿ ಎರಿಟಿಕಾ ಕಾರು ಡಿವೈಡರ್ ಮೇಲೆ ಹತ್ತಿ ಮತ್ತೊಂದು ರಸ್ತೆಗೆ ಚಲಿಸಿದ ಪರಿಣಾಮ ಬೆಳಗಾಂನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ವಿಪ್ಟ್ ಕಾರಲ್ಲಿದ್ದ ಶ್ರೀರಾಮಚಂದ್ರ(35) ಮತ್ತು ಧನಂಜಯ(35) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಸಿರ್ಸಿಗೆ ಹೊರಡಿದ್ದ ಐದು ಮಂದಿ ಕಾಲೇಜು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಸಿ.ಪಿ.ಐ. ರಂಗಸ್ವಾಮಿ, ಸಿ.ಪಿ.ಐ. ಚೇತನ್‍ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.