ತಿಪಟೂರು :
ತಾಲ್ಲೂಕಿನ ಈ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರಾಗಿ ಬಿತ್ತನೆ ಜೋರಾಗಿತ್ತು. ಇನ್ನೆನೂ ಬೆಳೆ ಕೈಗೆ ಬರುವ ಮೊದಲೆ ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ಬಂದಿದೆ.
ನಿತ್ಯವೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿನ ಹಂತದಲ್ಲಿರುವ ರಾಗಿ ಈಗ ನೆಲಕಚ್ಚಿದೆ. ರಾಗಿಯ ತೆನೆಯು ನೀರು ತುಂಬಿ ರಾಗಿ ಕಾಳು ನೆಲಕ್ಕೆ ಉದರಿ ಮೊಳಕೆ ಒಡೆಯುತ್ತಿವೆ. ಇದರಿಂದ ರೈತರಿಗೆ ನಷ್ಟವಾಗುವ ಸಾದ್ಯತೆಯೇ ಹೆಚ್ಚು. ಅಲ್ಲದೇ ರಾಗಿಯ ಬದಲು ಹುಲ್ಲಾದರೂ ಸಿಗುತ್ತದೇ ಎಂಬ ರೈತರ ಆಸೆಗೆ ರಾಗಿಯ ತೆನೆ ನೆಲಕ್ಕೆ ಮಲಗಿ ಮಳೆಯಿಂದ ನೆನದು ಅಲ್ಲಿಯ ಕರಗುವ ಪರಿಸ್ಥಿತಿ ಉಂಟಾಗಿದೆ. ಇದನ್ನೆ ಅಲ್ವಾ ಅತಿವೃಷ್ಟಿ, ಅನಾವೃಷ್ಟಿಯ ನಡುವೆ ರೈತರು ಮತ್ತು ಮಳೆಯ ನಡವಿನ ಜೂಜಾಟವೆನ್ನಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ