ನವದೆಹಲಿ: 
ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಸುದ್ದಿ ಮಾಡಿದ್ದ ಮಿಟೂ ಇದೀಗ ಕಾರ್ಪೊರೇಟ್ ಕಂಪೆನಿಗಳಿಗೂ ಕಾಲಿಟ್ಟಿದೆ. ಹಲವು ಮಹಿಳೆಯರು ಲೈಂಗಿಕ ಕಿರುಕುಳ ದೂರು ನೀಡಿರುವ ಹಿನ್ನಲೆಯಲ್ಲಿ ಟಾಟಾ ಸನ್ಸ್ ಅದರ ಬ್ರಾಂಡ್ ಸಲಹೆಗಾರ ಸುಹೆಲ್ ಸೇತ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ.
ಮುಂದಿನ ತಿಂಗಳು ನವೆಂಬರ್ 30ರಂದು ಟಾಟಾ ಸನ್ಸ್ ನಲ್ಲಿ ಸೇತ್ ಅವರ ಒಪ್ಪಂದ ಅವಧಿ ಮುಗಿಯಲಿದ್ದು, ಅವರ ಸೇವೆಯನ್ನು ಮುಂದುವರಿಸದಿರಲು ಕಂಪೆನಿ ನಿರ್ಧರಿಸಿದೆ. ಸೇತ್ ಅವರ ಮಾರ್ಕೆಟಿಂಗ್ ಕಂಪೆನಿ ಕೌನ್ಸೆಲೇಜ್ ಜೊತೆಗಿನ ಸಹಯೋಗವನ್ನು ಪರಾಮರ್ಶಿಸಿದ ನಂತರ ಟಾಟಾ ಗ್ರೂಪ್ ಈ ನಿರ್ಧಾರ ಕೈಗೊಂಡಿದೆ ಇದರಿಂದ ಶೇರು ಪೇಟೆಯಲ್ಲಿ ಏರುಪೇರುಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ









