ನಗರಸಭೆ ಚುನಾವಣೆ : ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ

ತಿಪಟೂರು

     ಇಂದು ನಡೆಯುವ ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ 31 ವಾರ್ಡ್‍ಗಳಿಂದ 48 ಮತಗಟ್ಟೆಗಳನ್ನು ಒಳಗೊಂಡಿದ್ದು ಇದರಲ್ಲಿ 2 ಅತೀಸೂಕ್ಷ್ಮ ಎಂದು ಹಳೇಪಾಳ್ಯದ ಸರ್ಕಾರಿ ಶಾಲೆಯಲ್ಲಿರುವ ವಾರ್ಡ್ 11 ಮತ್ತು 12 ಗಳನ್ನು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

       ನಗರಸಭಾ ಚುನಾವಣೆಯಲ್ಲಿ 31 ವಾರ್ಡ್‍ಗಳಿಂದ ಬಿ.ಜೆ.ಪಿ 26, ಕಾಂಗ್ರೆಸ್ 29, ಜೆ.ಡಿ.ಎಸ್ 26, ಬಿಎಸ್ಪಿ 1 ಮತ್ತು 52 ಜನ ಪಕ್ಷೇತರರು ಸೇರಿ 57 ಮಹಿಳಾ ಮತ್ತು 77 ಪುರುಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಭವಿಷ್ಯವನ್ನು ಇಂದು ನಡೆಯುವ ಚುನಾವಣೆಯಲ್ಲಿ 21897 ಪುರುಷ, 23358 ಮಹಿಳಾ ಮತ್ತು 3 ಇತರೆ ಮತದಾರರು ಸೇರಿ ಒಟ್ಟು 45258 ಮತದಾರರು ಇವರ ಭವಿಷ್ಯವನ್ನು ನಿರ್ಧರಿಸಲು ತಾಲ್ಲೂಕು ಆಡಳಿತವು ಸಕಲ ರೀತಿಯಲ್ಲಿ ಸನ್ನದ್ದಗೊಂಡಿದೆ.

       ಪಕ್ಷಗಳು ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪ್ರಣಾಳಿಕೆಯಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಗುರಿಯನ್ನು ಹೊಂದಿದ್ದು ಮುಖ್ಯವಾಗಿ ಶುದ್ಧನೀರು, ವಿದ್ಯುತ್, ಗ್ರಂಥಾಲಯ, ರಸ್ತೆ, ಯು.ಜಿ.ಡಿಯನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಮತದಾರರನ್ನು ಓಲೈಸಿ ಮತಪಡೆಯುವ ರಣತಂತ್ರವನ್ನು ಹೆಣೆಯುವುದಲ್ಲದೆ, ಕಾರ್ಯವಾಸಿ ಕತ್ತೆಕಾಲುಹಿಡಿಯುವಂತೆ ಎಲ್ಲರನ್ನು ನಯವಾಗಿ ಮಾತನಾಡಿಸುವ ಕಲೆಯನ್ನು ಅಭ್ಯರ್ಥಿಗಳು ರೂಢಿಸಿಕೊಂಡಿದ್ದು ಮನೆಮನೆಗೆ ತೆರಳಿ ಮತಕೇಳುವುದಲ್ಲದೆ ಇನ್ನು ಕೆಲವರು ನೇರವಾಗಿ ಮನೆಯ ಹಿರಿಯರ ಕಾಲಿಗೆ ಬಿದ್ದು ಈ ಬಾರಿ ನಮಗೆ ಮತವನ್ನು ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದಾರೆ.

        ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈಗಾಗಲೇ ತಮಗೆ ನಿಯೋಜಿತವಾಗಿರುವ ಮತಗಟ್ಟೆಗಳಿಗೆ ಬೇಕಾದಂತಹ ಪರಿಕರಗಳೊಂದಿಗೆ ತೆರಳಿ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಕಾರ್ಯನಡೆಯಲಿದ್ದು ಅಭ್ಯರ್ಥಿಗಳ ಭವಿಷ್ಯವನ್ನು ಮತಯಂತ್ರದೊಳಗೆ ಮೇ 31ರವರೆಗೆ ಭದ್ರಗೊಳಿಸಿ ಸಂಜೆ 5ರ ನಂತರ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಭದ್ರತಾಕೊಠಡಿಗೆ ಸೇರಿಸಲಿದ್ದಾರೆ.

        ಪೊಲೀಸ್ ಇಲಾಖೆಯಿಂದ ಸಕಲ ರೀತಿಯಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದ್ದು 2 ಡಿ.ಆರ್ ತುಕಡಿ, ನಮ್ಮ ಠಾಣೆಯ ಸಿಬ್ಬಂದಿಯ ಜೊತೆಗೆ ತಿಪಟೂರು ಗ್ರಾಮಾಂತರ ಮತ್ತು ಚಿಕ್ಕನಾಯಕನಹಳ್ಳಿಯಿಂದಲೂ ಹೆಚ್ಚುವರಿ ಸಿಬ್ಬಂದಿಯ ಜೊತೆಗೆ ಹೋಂಗಾಡ್ರ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap