ಲಾಕ್ ಡೌನ್ : ಅಗತ್ಯ ವಸ್ತುಗಳು ನಿಮ್ಮ ಮನೆಯ ಬಾಗಿಲಿಗೆ

ಗುಬ್ಬಿ:

     COVID-19 ಲಾಕ್ ಡೌನ್ ಸಮಯದಲ್ಲಿ ಸಾಮಾನ್ಯ ಜನರಿಗೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಮನೆಯ ಬಾಗಿಲಿಗೆ ತಲುಪಿಸುವಂತಹ ಸೌಲಭ್ಯ ಗುಬ್ಬಿ ನಗರದಲ್ಲಿ ಆರಂಭವಾಗಿದೆ.

  CHANGE PAY MMS TECHNOLOGIES PVT LTD   ಕಂಪನಿಯ ವತಿಯಿಂದ eSamudaay ಎಂಬ ವೇದಿಕೆಯ ಮುಖಾಂತರ ಗುಬ್ಬಿಯ ನಾಗರಿಕರಿಗೆ ದಿನಸಿ, ತರಕಾರಿ ಮತ್ತು ಔಷಧಿಯನ್ನು ತಮ್ಮ ಹತ್ತಿರದ ಅಂಗಡಿಗಳಿಂದ ಮನೆಯ ಬಾಗಿಲಿಗೆ ತಲುಪಿಸುತ್ತಿದ್ದಾರೆ. eSamudaay App ಅನ್ನು Google PlayStore ನಿಂದ ಡೌನ್ಲೋಡ್ ಮಾಡಿಕೊಂಡು ತಮಗೆ ಬೇಕಾದ ಅವಶ್ಯ ವಸ್ತುಗಳನ್ನು ಹತ್ತಿರದ  ಅಂಗಡಿಗಳಿಂದ ಆರ್ಡರ್ ಮಾಡಿ ಪಡೆಯಬಹುದಾಗಿದೆ.

     ಗುಬ್ಬಿಯ ನಿವಾಸಿಗಳಾದ ಸಂಸ್ಥೆಯ ಸಹ ಸಂಸ್ಥಾಪಕರು ದೈವಿಕ್, ಜೀವನ್ ಮತ್ತು ಸಂಚಿತ್, ಸಹೋದ್ಯೋಗಿಗಳಾದ ಮೋಹಿತ್, ಶ್ಯಾಮ್ ಮತ್ತು ಚೇತನ್ ಲಾಕ್ ಡೌನ್ ಸಮಯದಲ್ಲಿ ಗುಬ್ಬಿಯ ನಾಗರೀಕರಿಗೆ ತಮ್ಮ ಸಂಸ್ಥೆಯ ಮುಖಾಂತರ ನೆರವಾಗಲು ಪ್ರಯತ್ನಿಸಿದ್ದಾರೆ.ಈ ಕುರಿತಾಗಿ ತಾಲೂಕಿನ ತಹಸೀಲ್ದಾರ್ ಪ್ರದೀಪ ಹಿರೇಮಠ ರವರ ಗಮನಕ್ಕೆ ತಂದು, ಅವರ ಮಾರ್ಗದರ್ಶನದಲ್ಲಿ ಬೇಕಾದ ಅನುಮತಿ ಪತ್ರಗಳನ್ನು ಪಡೆದು, ಕಳೆದ ಹತ್ತು ದಿನಗಳಿಂದ ಸೇವೆ ಚಾಲ್ತಿಯಲ್ಲಿದೆ.

     eSamudaay ವೇದಿಕೆಯು ಉಚಿತವಾಗಿದ್ದು,ಸಣ್ಣ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ App ಮೂಲಕ ಆರ್ಡರ್ಗಳನ್ನು ಪಡೆದು, ವಿತರಣೆ ಸೌಲಭ್ಯವನ್ನು ಕೊಟ್ಟು ಹೆಚ್ಚು ಗ್ರಾಹಕರನ್ನು ಆಕಷಿಸಲು ಸಹಾಯವಾಗಲಿದೆ. ಸಣ್ಣ ಸಣ್ಣ ನಗರಗಳಲ್ಲಿ ಯುವಕರು ಹಲವು ಮಳಿಗೆಗಳನ್ನು ಮಾರಾಟಗಾರರನ್ನು ಒಟ್ಟುಗೂಡಿಸಿ eSamudaay ವೇದಿಕೆಯನ್ನು ಉಪಯೋಗಿಸಿಕೊಂಡು ಉದ್ಯೋಗವಕಾಶವನ್ನು ಕಲ್ಪಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಹಾಯವಾಣಿಗೆ  ಸಂಪರ್ಕಿಸಿ. :support@changepay.in
Phone no: 8951820821 /8892612842

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap