ಹೊಳಲ್ಕೆರೆ;
ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತೋರಿದ ಹಾದಿಯಲ್ಲಿ ಮುನ್ನಡೆಯುತ್ತಿರುವ ಶಿವಮೂರ್ತಿ ಮುರುಘಾ ಶರಣರು ಸಮಾಜದಲ್ಲಿ ಬದಲಾವಣೆಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು
ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು
ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಕಿ ಕೊಟ್ಟ ಹಾದಿಯಲ್ಲಿ ಮುರುಘಾ ಶರಣರು ನಡೆಯುತ್ತಿದ್ದಾರೆ. ಸಮಾಜದಲ್ಲಿ ಅಸಮಾನತೆ, ಜಾತಿಯತೆ ಮತ್ತು ಮೂಡನಂಭಿಕೆಗಳ ವಿರುದ್ದ ಸ್ವಾಮೀಜಿಗಳು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು
ಈ ಬಾರಿಯ ಚುನಾವಣೆಯಲ್ಲಿ ನಾವು 104 ಜನ ಶಾಸಕರಿದ್ದರು ಸರ್ಕಾರರಚನೆ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಆ ಸಂಧರ್ಭಒದಗಿ ಬರುತ್ತದೆ.ಈ ಭಾಗದ ಜನರ ಋಣವನ್ನು ತೀರಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ,ಮುರುಘಾ ಪರಂಪರೆ ನಾಡ ಪರಂಪರೆ. ಶರಣ ಸಂಸ್ಕøತಿಯನ್ನು ಗರ್ಭೀಕರಿಸಿಕೊಂಡಿರುವ ಪರಂಪರೆ ನಮ್ಮದು ಎಂದು ನುಡಿದರು
ಬೆಂಗಾಡಿಗಿದ್ದ ನಾಡನ್ನು ಭಕ್ತಿಯ ನಾಡನ್ನಾಗಿ ಮಾಡಿದವರು ಶ್ರೀ ಮುರುಗಿ ಶಾಂತವೀರಸ್ವಾಮಿಗಳು .ಮಲ್ಲಿಕಾರ್ಜುನ ಶ್ರೀಗಳ ವಿದ್ವತ್ತಿನ ಸಂಚಾರ ವಿದ್ಯುತ್ತಿನಂತೆ ಕೆಲಸ ಮಾಡುತ್ತಿತ್ತು. ಮಾನವನ ಮೆದುಳನ್ನು ಪ್ರಕಾಶಗೊಳಿಸುವುದರಲ್ಲಿ ಅವರು ಪ್ರಖ್ಯಾತಿ ಪಡೆದಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳು ಲೋಕ ಕಲ್ಯಾಣದಲ್ಲಿ ಮುಂದುವರಿದುಕೊಂಡು ಹೋಗುವಂತೆ ಶೈಕ್ಷಣಿಕ ಶಾಲಾ-ಕಾಲೇಜುಗಳನ್ನು ತೆರೆದು ಬರದ ನಾಡಿಗೆ ಅಕ್ಷರ ಕ್ರಾಂತಿಯ ಮಳೆಗರೆದರು .ಶ್ರೀಮಠದಿಂದ ಲಕ್ಷಾಂತರಜನರಿಗೆ ಬದುಕನ್ನು ಕಟ್ಟಿಕೊಳ್ಳಲು ಸಾದ್ಯವಾಗಿದೆ ಎಂದರು
ಬೆಂಗಳೂರು ಶ್ರೀ ಸರ್ಪಭೂಷಣಮಠದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಜಯದೇವ ಜಗದ್ಗುರುಗಳಿಂದ ಈಚೆಗೆ ಶ್ರೀಮಠ ಅತ್ಯಂತಅಭಿವೃದ್ದಿಕಾಣತೊಡಗಿದೆ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದರು.ಡಾ.ಶಿವಮೂರ್ತಿ ಮುರುಘಾ ಶರಣರು ಸಮಾಜಕ್ಕೆಉತ್ತಮ ಸಂದೇಶವನ್ನು ನೀಡುತ್ತಿದ್ದಾರೆಂದು ನುಡಿದರು.
ಶ್ರೀ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಬಸವಣ್ಣನವರಕಾಯಕ ಸಿದ್ದಾಂತವನ್ನು ಶ್ರೀಗಳು ಇಂದು ಮುಂದುವರಿಸಿದ್ದಾರೆ.ಅನುಭವ ಮಂಟಪದಲ್ಲಿ ಬಸವಣ್ಣನವರುಒಂದೊಂದುಜಾತಿಗೆಒಬ್ಬಬ್ಬರನ್ನು ಮುಖ್ಯಸ್ಥರನ್ನಾಗಿ ಮಾಡಿದರು.ಅವರ ಕೆಲಸವನ್ನು ಮುರುಘಾ ಶರಣರು ಮಾಡುತ್ತಿದ್ದಾರೆ. ಈ ಮಠಕ್ಕೆ ಭವ್ಯವಾದಇತಿಹಾಸವಿದೆ. ಶೈಕ್ಷಣಿಕಕ್ಷೇತ್ರದಲ್ಲಿ ಶ್ರೀಮಠ ತನ್ನದೇಆದಕಾಯಕದಲ್ಲಿತೊಡಗಿದೆ.ಸಮಾಜದಲ್ಲಿ ಬದಲಾವಣೆ ಮಾಡುತ್ತಿದ್ದಾರೆ.ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆ ನಿಲ್ಲಿಸದಂತೆ ಶ್ರೀಗಳು ಬಸವಣ್ಣನವರ ಪ್ರತಿಮೆ ನಿಲ್ಲಿಸಲು ಹೊರಟಿದ್ದಾರೆ. ನಮ್ಮೆಲ್ಲರ ಸಹಕಾರ ಅವಶ್ಯವಾಗದೆ ಎಂದು ಹೇಳಿದರು.
ಕಡೂರು ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, 12ನೇ ಶತಮಾನದಲ್ಲಿ ವೃತ್ತಿಆಧಾರದ ಮೇಲೆ ಅಸ್ಪøಶ್ಯತೆಗೆ ಒಳಗಾಗಿದ್ದೇವು.ಆದರೆಅಂದು ಬಂದ ಬಸವಾದಿ ಶರಣರುಅಸ್ಪøಶ್ಯತೆ ಹೋಗಲಾಡಿಸಲು ಪ್ರಯತ್ನಿಸಿದರು.
ಅದೇ ಕೈಂಕರ್ಯದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರುತೊಡಗಿದ್ದಾರೆಂದು ತಿಳಿಸಿದರು.ಕಾರ್ಯಕ್ರಮದಲ್ಲಿತುಮಕೂರು ಶ್ರೀ ಸಿದ್ಧಗಂಗಾಮಠದ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳುಸಮ್ಮುಖವನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿಬೆಂಗಳೂರು ಗಂಜಾಂಮಠದಶ್ರೀ ಮ.ನಿ.ಪ್ರ.ಚಿದ್ಛನಸ್ವಾಮಿಗಳು,ಕನಕಪುರ ಮರಳೇಗವಿ ಮಠದಡಾ.ಮುಮ್ಮಡಿ ಶಿವರುದ್ರಸ್ವಾಮಿಗಳು, ರಾವಂದೂರು ಶ್ರೀ ಮುರುಘಾಮಠದ ಶ್ರೀ.ಮ.ನಿ.ಪ್ರ.ಮೋಕ್ಷಪತಿ ಸ್ವಾಮಿಗಳು, ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತಮಠದ ಶ್ರೀ.ಮ.ನಿ.ಪ್ರ.ಮಹಾಂತರುದ್ರೇಶ್ವರ ಸ್ವಾಮಿಗಳು,ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ . ಮ . ನಿ .ಪ್ರ . ಜಯದೇವಸ್ವಾಮಿಗಳು , ಶರಣ ಸಂಸ್ಕತಿಉತ್ಸವ 2018ರ ಗೌರಾವಧ್ಯಕ್ಷರಾದ ಮಧುರೆ ಹೊಸದುರ್ಗದ ಶ್ರೀಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಹರಗುರುಚರಮೂರ್ತಿಗಳು, ಮಾಜಿ ಶಾಸಕರುಗಳಾದ ಎಂ.ಬಿ.ತಿಪ್ಪೇರುದ್ರಪ್ಪ, ಟಿ.ಹೆಚ್.ಬಸವರಾಜ್, ಪಿ.ರಮೇಶ್, ಎ.ವಿ.ಉಮಾಪತಿ, ವೈದ್ಯರಾದಡಾ.ನಾಗರಾಜ್.ಬಿ.ಸಜ್ಜನ್‍ಹೊಳಲ್ಕೆರೆ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಸವಿತಾ ಬಸವರಾಜ್, ಹಾಗೂ ಸದಸ್ಯರುಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
