ಹಕ್ಕುಪತ್ರ ವಿತರಿಸಲು ವಡೇರಹಳ್ಳಿ ನಿವಾಸಿಗಳ ಆಗ್ರಹ

ಹರಪನಹಳ್ಳಿ:

       ತಾಲ್ಲೂಕಿನ ವಡೇರಹಳ್ಳಿ ಕೊರಚರಹಟ್ಟಿ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ರೈತ ಸಂಘ (ಹುಚ್ಚವನಹಳ್ಳಿ ಬಣ)ದ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ಉಪವಿಭಾಗಾಧಿಕಾರಿ ರಾಹುಲ್ ಪಾಂಡ್ವೆ ಅವರಿಗೆ ಮನವಿ ಸಲ್ಲಿಸಿದರು.

         ಹಳ್ಳಿಕೇರಿ ಕಂದಾಯ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 2/ಎ2 ವಿಸ್ತೀರ್ಣ 10-86 ಸರ್ಕಾರಿ ಜಮೀನಲ್ಲಿ ಹಲವು ವರ್ಷಗಳಿಂದ ಸುಮಾರು 70-80 ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸವಾಗಿವೆ. ಅಲೆಮಾರಿ ಜನಾಂಗದ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ವಂತ ಮನೆ ಕಟ್ಟಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದು, ವಸತಿ ರಹಿತವಿಲ್ಲದೇ ವಾಸವಾಗಿವೆ.

         ಗುಡಿಸಲಲ್ಲಿ ವಾಸವಾಗಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಈವರಿಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಮೇಲೆ ತಿಳಿಸಿರುವ ಸರ್ಕಾರಿ ಸ್ಥಳದಲ್ಲಿ ದೇವಸ್ಥಾ, ಅಂಗನವಾಡಿ, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಮೈದಾನಕ್ಕೆ ಮೀಸಲಿರಿಸಿ ಉಳಿದ ಜಮೀನಲ್ಲಿ ಹಕ್ಕುಪತ್ರ ವಿತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

        ಈ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರಸಾಪುರ ಕಾಳಪ್ಪ, ಕಂಚೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ರೈತಸಂಘದ ಮುಖಂಡರಾದ ಕೆಂಚಪ್ಪ, ತಿಮ್ಮಣ್ಣ, ಗಂಗಾಧರ, ಆನಂದಪ್ಪ, ಅಣ್ಣಪ್ಪ, ಕೃಷ್ಣಪ್ಪ, ಶೇಷಪ್ಪ, ಮಾರುತಿ, ಸುಂಕಪ್ಪ, ಹನುಮಂತಪ್ಪ, ಇಂದ್ರಮ್ಮ, ಅನುಷಾ, ಕೆಂಚಮ್ಮ, ರಂಜಿತಾ, ದುರುಗಮ್ಮ, ನಾಗಮ್ಮ ಇತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap