ಬೆಂಗಳೂರು
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ಫ್ಯಾನ್‍ಗೆ ವೇಲ್ ನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಪಣ್ಣ ಲೇಔಟ್‍ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಪಾಪಣ್ಣ ಲೇಔಟ್‍ನ ಮಹೇಶ್ ಚೌಹಾನ್(26)ಎಂದು ಗುರುತಿಸಲಾಗಿದೆ,ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕೆಲಸ ಮುಗಿಸಿಕೊಂಡು ಬುಧವಾರ ಸಂಜೆ 6ರ ವೇಳೆ ಮನೆಗೆ ಬಂದಿದ್ದಾರೆ.
ಮನೆಯವರು ಹೊರಗಡೆ ಹೋಗಿರುವುದನ್ನು ನೋಡಿ ಫ್ಯಾನ್‍ಗೆ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮಾನಸಿಕ ಖಿನ್ನತೆಯಂದ ಮಹೇಶ್ ಆತ್ಮಹತ್ಯೆಗೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ
ಘಟನಾ ಸ್ಥಳಕ್ಕೆ ರಾಮಮೂರ್ತಿನಗರ ಪೆÇಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮಹೇಶ್ ಸಂಬಂಧಿಕರ ಬಳಿ ಪೆÇಲೀಸರು ಮಾಹಿತಿ ಪಡೆದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
