ಮಾರುಕಟ್ಟೆಗೆ ಲಗ್ಗೆಯಿಟ್ಟ ಹಲಸು ….!!!

ಚೇಳೂರು

     ಉಂಡು ಮಾವು ತಿನ್ನು ಹಸಿದು ಹಲಸು ತಿನ್ನು ಏನ್ನುವ ಗಾದೆಯಂತೆ ಹಸಿದ ಹೊಟ್ಟೆಗೆ ರುಚಿಯಾದ ಹಲಸಿನ ಹಣ್ಣಿನ ರಾಶಿಗಟ್ಟಲೇ ಹಣ್ಣುಗಳು ಈಗ ಚೇಳೂರಿನ ಮಾರುಕಟ್ಟೆಗೆ ಬರುತ್ತಿವೆ. ಈ ಹಣ್ಣುಗಳನ್ನು ನೋಡುತ್ತಿದ್ದರೆ ಅಲ್ಲಿಯೇ ಹಚ್ಚಿ ತಿನ್ನುವಷ್ಟು ಮಟ್ಟಿಗಿವೆ.

      ಒಂದು ಕಡೆ ಲೋಕಸಮರದ ಚುನಾವಣೆಯ ಮಾತಗಳನ್ನು ಆಡುತ್ತ ಮತ್ತೊಂದು ಕಡೆ ಸ್ವಾಮಿ ಈ ಹಣ್ಣು ಬಹಳ ರುಚಿಯನ್ನು ತುಂಬಿರುವ ಜೊತೆಗೆ ಅದರ ತುಂಬಾ ಎಲ್ಲ ತೊಳೆಗಳೇ ತುಂಬಿ ಕೊಂಡಿವೆ ಗೋತ್ತ ನಿಮಗೆ ಎಂದು ಬೆಳೆದ ರೈತ ಮಾತನಾಡುತ್ತಿರುವ ದೃಶ್ಯಗಳು ಚೇಳೂರಿನ ಎಪಿಎಂಸಿ ಆವರಣದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಕಾಣುತ್ತಿವೆ.

       ಈ ಮಾರುಕಟ್ಟೆ ಈಗಲೇ ವಾರದ ಶುಕ್ರವಾರ.ಶನಿವಾರ.ಭಾನುವಾರ.ದಿನಗಳಂದು ನೆಡೆಯುವ ವಹಿವಾಟಿಗೆ ಚೇಳೂರಿನ ಸುತ್ತಮುತ್ತ ಗ್ರಾಮದ ರೈತರು ತರುವ ಹಣ್ಣುಗಳೇ 10 ಲೋಡಿಗಿಂತ ಹೆಚ್ಚಿಗೆ ಬರುತ್ತಿವೆ.ಈಗ ಬರುವ ಹಣ್ಣುಗಳ ಬೆಲೆ 50 ರೂ ನಿಂದ 600 ರೂಗಳವರೆಗೆ ಮಾರಟವಾಗುತ್ತಿವೆ.ತೂಕ ಸುಮಾರು 10 ಕೆಜಿಯಿಂದ 60 ಕೆಜಿ ತುಗುವಷ್ಟು ಗಾತ್ರದ ಹಣ್ಣುಗಳು ಬರುತ್ತಿವೆ.ಈ ಹಣ್ಣುಗಳನ್ನು ಕೊಳ್ಳಲು ರಾಜ್ಯದ ಹಲವಾರು ಜಿಲ್ಲೆಗಳಿಂದ ವರ್ತಕರು ಬರುತ್ತಿದ್ದಾರೆ ಈಗ.

       ಮುಂದಿನ ದಿನಗಳಲ್ಲಿ ಈ ಮಾರುಕಟ್ಟೆಗೆ ಬೇರೆ ಜಿಲ್ಲೆಗಳಿಂದ ರೈತರು ತಾವು ಬೆಳೆದ ಹಣ್ಣುಗಳನ್ನು ಮಾರಟ ಮಾಡಲು ತರುತ್ತಾರೆ ಜೊತೆಗೆ ಹಣ್ಣುಗಳನ್ನು ಕೊಳ್ಳಲು ಸಹ ಈ ರಾಜ್ಯದ ವರ್ತಕರಿಂದ ಬೇರೆ ರಾಜ್ಯದ ವರ್ತಕರು ಸಹ ಬಂದು ಕೊಂಡು ಕೊಳ್ಳುತ್ತಾರೆ. ಆಗ ದಿನ ಒಂದಕ್ಕೆ ಸುಮಾರು 50 ಲೋಡ್‍ನಷ್ಟು ಹಲಸಿನ ಹಣ್ಣುಗಳು ಈ ಮಾರುಕಟ್ಟೆಯಿಂದ ಹೊರಕ್ಕೆ ಹೋಗುತ್ತವೆ ಎಂದು ಇಲ್ಲಿನ ವರ್ತಕರು ತಮ್ಮ ಹಲವಾರು ವರ್ಷಗಳ ಅನುಭವದಲ್ಲಿ ಹೇಳುತ್ತಿದ್ದಾರೆ

      ಒಂದು ಕಡೆ ಈ ಹಣ್ಣುಗಳನ್ನು ನೋಡುತ್ತಿದ್ದರೆ ಬಾಯಿ ಚಪ್ಪರಿಸುವಂತೆ ಹಿರಿಯರಿಗೆ ಕಾಣುತ್ತಿದ್ದರೆ ಅದು ತಿನ್ನುವ ಭಾಗ್ಯವನ್ನು ನಾವು ಕಳೆದುಕೊಂಡಿದ್ದೇವೆ ನಮ್ಮ ಮನೆಯವರು ಇದನ್ನು ತಿನ್ನಲಿ ಎಂದು ತಮ್ಮ ಹಳೆಯ ಅನುಭವದಲ್ಲಿ ರುಚಿಯಾದ ಹಣ್ಣುನ್ನು ರಾಶಿಗಳಲ್ಲಿ ಆರಿಸಿಕೊಂಡು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳನ್ನು ಸಹ ಈ ಮಾರುಕಟ್ಟೆಯಲ್ಲಿ ಕಾಣುತ್ತೇವೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link