ಕೊರಟಗೆರೆ
ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದುರೈತರು ಬಿತ್ತನೆಗೂ ಮುನ್ನಾ ಸೈನಿಕ ಹುಳುವನ್ನ ತಡೆಯಲುಇಲಾಖೆಯ ಅಧಿಕಾರಿಗಳು ಪ್ರತಿಗ್ರಾಮಕ್ಕೆ ಬೇಟಿಕೊಟ್ಟು ರೈತರಿಗೆ ಸಂಪೂರ್ಣ ಮಾಹಿತಿ ನೀಡಲು ಸಜ್ಜಾಗಬೇಕು ಎಂದು ಮಧುಗಿರಿ ಉಪ ಕೃಷಿ ನಿರ್ದೇಶಕ ಟಿ.ಎನ್. ಅಶೋಕ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿಕೃಷಿ ಇಲಾಖೆಯಿಂದಏರ್ಪಡಿಸಲಾಗಿದ್ದ 2019-20ನೇ ಸಾಲಿನ ಗುಣ ನಿಯಂತ್ರಣ ಕಾರ್ಯಕ್ರಮದಡಿ ಮುಸುಕಿನ ಜೋಳ ಮತ್ತುರಾಗಿ ಬೆಳೆಯಲ್ಲಿ ಸೈನಿಕ ಹುಳುವಿನ ನಿರ್ವಹಣೆ ಬಗ್ಗೆ ಕ್ಷೇತ್ರ ಸಿಬ್ಬಂದಿ ವರ್ಗದವರಿಗೆ ತಾಂತ್ರಿಕ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ತಮ್ಮ ಜಮೀನಿನ ಉಳುಮೆ ಮಾಡುವಾಗ ಆಳವಾಗಿ ಉಳುಮೆ ಮಾಡಿದಾಗ ಒಳಗೆ ಇರುವ ಸೈನಿಕ ಹುಳು ಬಿಸಿಲಿನ ತಾಪಕ್ಕೆ ನಾಶವಾಗುತ್ತವೆ. ಕಳೆದ ಎರಡು ವರ್ಷಗಳ ಹಿಂದೆ ಸೈನಿಕ ಹುಳು ಕಡಿಮೆ ಇತ್ತು ಅದರೆ ದಿನೇ ದಿನೇ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಸೈನಿಕ ಹುಳು ಜಾಸ್ತಿಯಾಗಿದ್ದು, ಈ ಹುಳುವನ್ನ ತಡೆಯಲು ನಾವು ಯಾವರೀತಿ ಮುಜಾಗ್ರತ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗುತ್ತಿದೆ. ಈ ಹುಳುಗಳು 80 ಬಗೆಯ ಬೆಳೆಗಳ ಎಲೆಗಳನ್ನ ತಿನ್ನುತ್ತವೆ ಎಂದು ಹೇಳಿದರು.
ತಾಲೂಕಿನ ಪ್ರತಿ ಪರ್ಟಿಲೇಜರ್ ಅಂಗಡಿಗಳಲ್ಲಿ ರೈತರಿಗೆ ಸೈನಿಕ ಹುಳು ತಡೆಗಟ್ಟಲು ಕರ ಪತ್ರಗಳನ್ನ ನೀಡಬೇಕು, ಈ ಸೈನಿಕ ಹುಳು ಯಾವ ರೀತಿ ಎಂದರೇ ರಾತ್ರಿ ಚಿಗುರಿದ ಮುಸುಕಿನ ಜೋಳ ಸೇರಿ ಫಸಲಿನ ಎಲೆ, ಕಾಂಡ ತಿಂದು ಹಾಕಿ ಬೆಳಿಗ್ಗೆ ಮಣ್ಣಿನೊಳಗೆ ಅವಿತು ಕೊಳ್ಳುತ್ತದೆ ಈಗಾಗಲೇ ಕೆಲ ರೈತರಿಗೆ ಈ ಸೈನಿಕ ಹುಳುವಿನ ಬಗ್ಗೆ ತಿಳಿದಿದ್ದು, ವ್ಯಾಪಕವಾಗಿ ಸೈನಿಕ ಕೀಟದ ಉಪಸ್ಥತಿ ಮತ್ತು ಹರಡದಂತೆ ನಿಗಾವಹಿಸಲು ರೈತರಿಗೆ ತಿಳಿಸುವುದು ನಮ್ಮ ಜವಾಬ್ದಾರಿಯಾಗಿದೆ, ಎಂದು ತಿಳಿಸಿದರು.
ತುಮಕೂರು ಹಿರೇಹಳ್ಳಿ ಕೃಷಿ ವಿಜ್ಞಾನಿ ಕೇಂದ್ರದ ಹನುಮಂತೇಗೌಡ ಮಾತನಾಡಿಸೈನಿಕ ಹುಳು ಮೊದಲು ಅಮೇರಿಕದಲ್ಲಿ ಕಾಣಿಸಿಕೊಂಡು ಈಗ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಿದೆ.ರೈತರು ಸಾಲ ಸೂಲ ಮಾಡಿ ತಮ್ಮ ಜಮೀನಿನಲ್ಲಿ ಬೆಳೆ ಹಿಡುತ್ತಾರೆ ಮಳೆ ಒಂದುಕಡೆ ಕೈಕೊಟ್ಟರೇ ಬಂದಿರುವ ಬೆಳೆಯನ್ನ ಕೀಟನಾಶಕಗಳು ತಿಂದುರೈತ ಸಂಕಷ್ಟಕ್ಕೆ ಸಿಲುಕುವ ಮುನ್ನ ನಮ್ಮ ಕೃಷಿ ಅಧಿಕಾರಗಳು ಅವರಿಗೆಧೈರ್ಯತುಂಬುವ ಕೆಲಸ ಮಾಡಬೇಕುಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ನಾವು ಈ ಸೈನಿಕ ಹುಳುವಿನ ಬಗ್ಗೆ ತಿಳಿದಿದ್ದು ನಾವು ಈ ಹುಳುವನ್ನ ತಡೆಯಲುಅಗತ್ಯಕ್ರಮವನ್ನ ನಿರ್ವಹಿಸಲು ಅಧಿಕಾರಿಗಳು ರೈತರಿಗೆ ಸಹಕಾರ ನೀಡಬೇಕಿದೆ, ಸೈನಿಕ ಹುಳು ಸುಮಾರು 150ರಿಂದ 200 ಮೊಟ್ಟೆಗಳು ಒಂದು ಜಾಗದಲ್ಲಿ ಇಡುತ್ತವೆ. ಈ ಮೊಟ್ಟೆಗಳು ಒಣ ಹುಲ್ಲಿನಿತರ ಇರುತ್ತವೆ, ರೈತರು ಬೆಳೆ ಇಟ್ಟಿದ ನಂತರ ಮೂರು ದಿನಕ್ಕೊಮ್ಮೆ ನೋಡಬೇಕು ಎಲ್ಲಿ ಈ ಹುಳುಗಳು ಕಂಡು ಬಂದಲ್ಲಿ ಅದಕ್ಕೆ ಬೇಕಾದ ಕೀಟನಾಶಕವನ್ನು ಸಿಂಪಡಿಸಿ ಹುಳಗಳನ್ನು ತಡೆಯಬೇಕು ಎಂದರು.
ಇದೆ ಸಂದರ್ಭದಲ್ಲಿ ತುಮಕೂರು ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಜೆ.ಡಿ ಕಚೇರಿಯ ಎ.ಡಿ.ಎ ಭಾಗ್ಯಮ್ಮ, ಸಹಾಯಕ ಕೃಷಿ ನಿರ್ದೇಶಕ ಹೆಚ್.ನಾಗರಾಜು, ತಾಂತ್ರಿಕ ಅಧಿಕಾರಿ ನೂರ್ ಅಜಾಮ್, ಮಧುಗಿರಿ ಕವಿತ, ವಿಜಯಮೂರ್ತಿ, ಸೇರಿದಂತೆ ಬಿತ್ತನೆಬೀಜ ಮಾರಾಟಗಾರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ