ಜಗಳೂರು:
ತಾಲೂಕಿನ ಕಲ್ಲೇದೇವಪುರದಲ್ಲಿ ಕಲ್ಲೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 5.30ರಿಂದ ಪ್ರಾರಂಭವಾದ ಭಕ್ತಸಮೂಹದಿಂದ ಮಹಾಭಿಷೇಕ,ಹರಕೆ ತೀರಿಸುವಿಕೆ ಮೀಸಲು ಅರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಕ್ತಿಪರ್ವಕ್ಕೆ ಸಾಕ್ಷಿಯಾದರು.ಸಾಯಂಕಾಲ ದೇವರ ಉತ್ಸವಮೂರ್ತಿ ಪಕ್ಕದ ಬಸಪ್ಪನಹಟ್ಟಿ ಗ್ರಾಮಕ್ಕೆ ತೆರಳಿ ಹೊಳೆ ಪೂಜೆಯನ್ನು ನೆರವೇರಿಸಿ ನಂತರ ನೇರವಾಗಿ ರಥೋತ್ಸವವದ ಬಳಿ ಆಗಮಿಸಿ ಮೂಲ ನಕ್ಷತ್ರ ಸೇರುತ್ತಿದ್ದಂತೆ ರಥೋತ್ಸವ ಮುಂದೆ ಸಾಗಿತು. ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಗೌಡ್ರು ಜಯ್ಯಪ್ಪ ಅವರ ಮಗ ನವೀನ್ ಎಂಬುವರಿಗೆ 1.20 ಲಕ್ಷಗಳಿಗೆ ಪಠ ಹರಾಜು ಪಡೆದರು.
ಈ ಜಾತ್ರೆಯು 14 ದಿನಗಳಕಾಲ ಇಂದಿನಿಂದ ಪ್ರಾರಂಭವಾಗಿ ಬಸವಜಯಂತಿ ಹಬ್ಬದವರೆಗೂ ಜರುಗುವುದು ಈ ಮದ್ಯೆ ಎತ್ತಿನ ವ್ಯಾಪರ ಬಿರುಸಿನಿಂದ ನಡೆಯುತ್ತದೆ.ರಥೋತ್ಸವದ ವಿಶೇಷ:ರಥೋತ್ಸವ ಪ್ರಾರಭಕ್ಕೂ ಮುನ್ನ ಗೊಂಬೆ ಮತ್ತು ಕುದುರೆ ಛದ್ಮ ವೇಷಾಧಾರಿಗಳು ಡೊಳ್ಳು ಕುಣಿತಕ್ಕೆ ಹೆಜ್ಜೆಹಾಕಿದ್ದು ಆಗಮಿಸಿದ್ದ ಭಕ್ತರನ್ನು ಗಮನಸೆಳೆದದ್ದು ವಿಶೇಷವಾಗಿದ್ದು ರಾತ್ರಿ ಕಲಾ ಪ್ರದರ್ಶನಕ್ಕಾಗಿ ಕಲ್ಲೇಶ್ವರ ನಾಟಕ ನಾಟ್ಯಕಲಾಸಂಘದವತಿಯಿಂದ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು.