ದೇಶದ ಸಾಲ ಏರಿಸಿದ್ದೇ ಮೋದಿಯ ಅಚ್ಛೆ ದಿನ್ : ಸಿಎಂ ಇಬ್ರಾಹಿಂ

 ಚಿಂಚೋಳಿ

       ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಭಾರತದ ಒಟ್ಟು ಸಾಲ 53 ಲಕ್ಷ ಕೋಟಿ ಇತ್ತು. ಮೋದಿ ಅಧಿಕಾರಕ್ಕೆ ಬಂದ ಮೇಲೆ 5 ವರ್ಷದಲ್ಲೇ 30 ಲಕ್ಷ ಕೋಟಿ ಆಗಿದೆ. ಈಗ ದೇಶದ ಒಟ್ಟು ಸಾಲ 83 ಲಕ್ಷ ಕೋಟಿ ಮುಟ್ಟಿದೆ ಇದು ಅಚ್ಛೇ ದಿನ್ ಎಂದು ಎಂ ಎಲ್ ಸಿ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ ಮತ್ತು ಕಡದೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

       ಕೇಂದ್ರದಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದ್ದು ಜನರ ದಿನ ಬಳಕೆ ವಸ್ತುಗಳು, ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ.ಇದನ್ನು ಪ್ರಶ್ನೆ ಮಾಡಿದರೆ ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಾರೆ ಎಂದು ಟೀಕಿಸಿದರು.

     ಮೋದಿ ಕರೆಯದೇ ಪಾಕಿಸ್ಥಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ. ಸರ್ವಜ್ಞನ‌ ವಚನದಂತೆ ಬರಿಯದೆ ಓದುವವನ ಕರೆಯದೇ ಬರುವವನ ಕರೆಯದೇ ಬರುವವನ‌. ಮುಂದಿನ ಸಾಲು ನೀವೆ ಸೇರಿಸಿಕೊಳ್ಳಿ ಎಂದು ನುಡಿದರು.ಬಿಜೆಪಿಯವರಿಗೆ ಹಿಂದುಳಿದವರು, ಮುಸಲ್ಮಾನರು ದಲಿತರು ಬೇಕಿಲ್ಲ. ಈ ಜಾತಿಗೆ ಟಿಕೇಟ್ ಕೊಟ್ಟಿಲ್ಲ. ನಾವು ಮುಸಲ್ಮಾನರು ಮೋದಿಗೆ ಹೆದರಿಲ್ಲ ಹೆದರುವುದು ಇಲ್ಲ ನಾವು ಹಿಂದು ಮುಸಲ್ಮಾನರು ಭಾರತೀಯರ ಮಕ್ಕಳು ಒಂದೇ ಎಂದರು.

      ತ್ರೇತಾಯುಗದಲ್ಲಿ ರಾವಣ‌ ಹೋದ ದ್ವಾಪರಯುಗದಲ್ಲಿ ದುರ್ಯೋಧನ ಹೋದ ಕಲಿಯುಗದಲ್ಲಿ ಮೋದಿ ಹೋಗುತ್ತಾನೆ ಎಂದು ವಿಭಿನ್ನವಾಗಿ ವ್ಯಾಖ್ಯಾನಿಸಿದರು.ವೇದಿಕೆಯ ಮೇಲೆ ಮಾಜಿ‌ ಸಿಎಂ ಹಾಗೂ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಸಂಸದರಾದ ಹಾಗೂ ಕಾಂಗ್ರೇಸ್ ನಾಯಕರಾದ ಎಂ ಮಲ್ಲಿಕಾರ್ಜುನ ಖರ್ಗೆ, ಎಂಎಲ್ ಸಿಗಳಾದ ಸಿಎಂ ಇಬ್ರಾಹಿಂ, ಶರಣಪ್ಪ ಮಟ್ಟೂರು, ಶಾಸಕರಾದ ಅಮರೇಗೌಡ ಭಯ್ಯಾಪುರ, ನಾರಾಯಣರಾವ್, ತಿಪ್ಪಣ್ಣಪ್ಪ ಕಮಕನೂರು, ಭೀಮಣ್ಣ ಸಾಲಿ, ರಾಜೇಶ್ ಗುತ್ತೇದಾರ ಸೇರಿದಂತೆ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap