ದಾವಣಗೆರೆ:
ಮಹಾನಗರ ಪಾಲಿಕೆಯ 33ನೇ ವಾರ್ಡಿನ ಸರಸ್ಪತಿ ಬಡಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಕಾಂಗ್ರೆಸ್ ಮುಖಂಡರು, ಅಹಿಂದ ವರ್ಗಗಳ ಮುಖಂಡರು ಮನೆಮನೆಗೆ ತೆರಳಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಗುರುರಾಜ್, 20 ವರ್ಷಗಳಲ್ಲಿ ಅಹಿಂದ ವರ್ಗಕ್ಕೆ ಲೋಕಸಭೆಗೆ ಸ್ಪರ್ದಿಸಲು ಅವಕಾಶ ಸಿಕ್ಕಿಲ್ಲ. ಈ ಬಾರಿ ಕಾಂಗ್ರೆಸ್‍ನಿಂದ ಸಾಮಾನ್ಯ ಕಾರ್ಯಕರ್ತ ಮಂಜಪ್ಪ ಟಿಕೆಟ್ ಸಿಗುವಂತೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಅವಕಾಶ ಕಲ್ಪಿಸಿದ್ದಾರೆ.
ಈ ಅವಕಾಶದ ಸದುಪಯೋಗವನ್ನು ಅಹಿಂದ ವರ್ಗ ಪಡೆದುಕೊಳ್ಳುವ ಮೂಲಕ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎಲ್.ರೇವಣ್ಣ, ಹಾಲೆಕಲ್ಲು ಅರವಿಂದ. ಎಂ.ಬಿ.ದ್ಯಾಮಣ್ಣ. ಕೆ.ನಾಗಪ್ಪ, ಶಿವಣ್ಣ, ರಾಜಣ್ಣ, ಉಮೇಶ್, ತಿಪ್ಪೇಶ್, ಚಂದ್ರು, ಮಂಜಣ್ಣ, ಪರುಶುರಾಮ್, ಪ್ರಶಾಂತ್ ಪಚ್ಚಿ, ಮೈಲಾರಲಿಂಗಪ್ಪ, ಮಂಗಳಮ್ಮ, ಸುಲೋಚನಮ್ಮ, ಭಾಗ್ಯಮ್ಮ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
