ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಟವಾದ ಗ್ರಂಥ: ಹೆಚ್.ಬಿಲ್ಲಪ್ಪ

ಹೊಳಲ್ಕೆರೆ:

      ಭಾರತೀಯ ಸಂವಿಧಾನ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಅತ್ಯಂತ ಶ್ರೇಷ್ಟ ಗ್ರಂಥ. ಸಂವಿಧಾನ ರಚನೆಯಾಗಿ 7 ದಶಕಗಳು ಕಳೆದಿವೆ. ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕು ಕಾನೂನಿನ ಚೌಕಟ್ಟಿನಲ್ಲಿ ನಾವೆಲ್ಲ ಜೀವಿಸಬೇಕು. ಸಂವಿಧಾನ ನೀಡಿರುವ ಆಶಯಗಳನ್ನು ಕರ್ತವ್ಯ ಎಂದು ಗೌರವಿಸಬೇಕು. ಎಂದು ರಾಜ್ಯ ಉಚ್ಚ ನ್ಯಾಯಾಲಯದ ಗೌರವ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಪ್ರತಿಪಾದಿಸಿದರು.

       ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ತಾಲ್ಲೂಕು ಆಡಳಿತ ಹಾಗೂ ಅನಾಥಸೆವಾಶ್ರಮದ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಮಲ್ಲಾಡಿಹಳ್ಳಿ ಸೇವಾಶ್ರಮದಲ್ಲಿ ಹಮ್ಮಿಕೊಂಡಿದ್ದು ಈ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

        ನಮ್ಮ ಸಂವಿಧಾನ ಅತ್ಯಂತ ಸುಂದರ ವಿಶಿಷ್ಟ ದಾಖಲೆಯನ್ನು ಹೊಂದಿರುವ ಪವಿತ್ರ ಸಂವಿಧಾನ. ನಮ್ಮ ಸಂವಿಧಾನದಲ್ಲಿ ರಾಷ್ಟ್ರೀಯ ಧರ್ಮ, ನಮ್ಮ ರಾಷ್ಟ್ರೀಯ ಧ್ವಜ, ಈ ಘನತೆಯನ್ನು ಪ್ರತಿಯೊಬ್ಬ ಭಾರತೀಯನು ಗೌರವ ಬೆಲೆ ನೀಡಬೇಕು. ನಾವು ಭಾರತೀಯರು ಸಂವಿಧಾನದ ವ್ಯಾಪ್ತಿಗೆ ಬರುವ ಪ್ರಜಾ ತಂತ್ರ ವ್ಯವಸ್ಥೆಯನ್ನು ವಿವಿಧ ರಾಜ್ಯಗಳ, ವಿವಿಧ ಭಾಷೆಗಳ, ವಿವಿಧ ಧರ್ಮಗಳು ಸಂತೋಷದಿಂದ ಸ್ವೀಕರಿಸಿದ್ದೇವೆ.

       ನಾವೆಲ್ಲರು ಸಂವಿಧಾನದ ಅಡಿಯಲ್ಲಿ ಇಂದು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಭಾರತೀಯ ಜನತೆಗೆ ಪ್ರಜಾಪ್ರಭುತ್ವದ ಸಾರ್ವಭೌಮತೆಯನ್ನು ನೀಡಿದೆ. ಸಂವಿಧಾನ ನೀಡಿರುವ ಎಲ್ಲಾ ಮೌಲ್ಯಗಳನ್ನು ತಿಳಿದುಕೊಳ್ಳುವುದು ಇನ್ನು ಸಾಧ್ಯವಾಗಿಲ್ಲ.

       ನಮ್ಮ ಸಂವಿಧಾನದ ಪ್ರಕಾರ ಪ್ರಜೆಗಳೇ ಪ್ರಭುಗಳು ಅಧಿಕಾರಿಗಳಾಗಲಿ ಚುನಾಯಿತ ಪ್ರತಿನಿಧಿಗಳಾಗಲಿ ಯಾರು ಪ್ರಭುಗಳು ಎಂದು ಭಾವಿಸಬಾರದು. ಈ ಮನೋಭಾವ ಬದಲಾವಣೆಯಾಗಬೇಕು. ಜನರ ಒಳಿತಿಗಾಗಿ ಪ್ರಜಾ ತಂತ್ರದ ತತ್ವವನ್ನು ಸಂವಿಧಾನ ಅಂಗೀಕರಿಸಿದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಪ್ರಜೆಗಳಿಗೆ ನೀಡಲಾಗಿದೆ ಎಂದು ನ್ಯಾಯ ಮೂರ್ತಿಗಳು ವಿಶ್ಲೇಷಿಸಿದರು.

     ಹಿಂದೆ ದೇಶದಲ್ಲಿ ರಾಜರುಗಳ ಪ್ರಭುತ್ವದಲ್ಲಿ ಸಾವಿರಾರು ಸಂಸ್ಥಾನಗಳಿದ್ದವು. ಅನುವಂಶಿಕವಾಗಿ ಚಾಲನೆಯಲ್ಲಿತ್ತು. ಆಗ ಅವರಿಗೆ ಬೇಕಾದ ಜನಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಆದರೆ ನಮ್ಮ ಸಂವಿಧಾನ 1949 ನ.26ರಂದು ಜಾರಿಗೆ ಬಂದ ನಂತರ ಭಾರತೀಯ ಜನರು ಸರ್ವಸ್ವತಂತ್ರರಾದರು ಮತ್ತು ಎಲ್ಲಾ ಮೂಲಭೂತ ಹಕ್ಕುಗಳನ್ನು ಪಡೆದರು. ಸಂವಿಧಾನ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರು ಬದುಕಬೇಕು.

         ಸಂವಿಧಾನ ಪ್ರಜಾತಂತ್ರದ ಮೌಲ್ಯಗಳ ದಾಖಲೆಗಳನ್ನು ಮಾಡಲಾಗಿದೆ. ಆದರೆ ಸರ್ವರಿಗೂ ಸಾಮಾಜಿಕ ನ್ಯಾಯ, ಸಮಾನತೆ, ಮೇಲು, ಕೀಳು, ಅಸ್ಪಶ್ಯತೆ ಇವುಗಳನ್ನು ಹೋಗಲಾಡಿಸಲು ಸಂವಿಧಾನದಲ್ಲಿ ನಮೂದಿಸಲಾಗಿದೆ. ಆದರೆ ಸಮಾನತೆ, ಸಮಭಾವನೆ, ಬಡತನ, ಮೌಢ್ಯ ಅಸ್ಪಶ್ಯತೆ ಮುಂತಾದ ಸಾಮಾಜಿಕ ಹೀನ ಪಡಿಗುಗಳು ಇನ್ನು ಮುಂದುವರಿದಿವೆ ಎಂದು ನ್ಯಾಯ ಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು

         ಈ ಭಯಾನಕ ಅಂಟು ಜಾಡಿಯವನ್ನು ರದ್ದುಗೊಳಿಸಬೇಕು. ನಮ್ಮ ಜನರು ಸಂವಿಧಾನವನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಮೂಲ ಭೂತ ಹಕ್ಕು ಅತ್ಯಂತ ಶ್ರೇಷ್ಟವಾದುದು ಜೊತೆಗೆ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಚಲನ ಶೀಲತೆ, ಇವುಗಳನ್ನು ಅನುಸರಿಸಬೇಕು. ಜೊತೆಗೆ ನಮ್ಮ ಕರ್ತವ್ಯಗಳಾದ ರಾಷ್ಟ್ರ ಪ್ರೇಮ, ದೇಶ ಭಕ್ತಿ, ರಾಷ್ಟ್ರಧ್ವಜಕ್ಕೆ ಗೌರವ, ರಾಷ್ಟ್ರ ಗೀತೆಗೆ ಗೌರವ, ಹೊರದೇಶದ ಜನರನ್ನು ಸಹೋದರರಂತೆ ಕಾಣುವುದು, ಪರಿಸರ ರಕ್ಷಣೆ ಪ್ರಾಣಿ ಸಂರಕ್ಷಣೆ ಮಾಡುವುದು ಸಹ ಅತ್ಯಂತ ಸೂಕ್ಷ್ಮವಾಗಿ ನಮ್ಮ ಸಂವಿಧಾನ ಪ್ರಸ್ತುತಪಡಿಸಿದೆ.

        ನಮ್ಮ ಸಂವಿಧಾನದಲ್ಲಿ ಸಾಕಷ್ಟು ಬದಲಾವಣೆ ತಂದರು ಸಮಾಜದಲ್ಲಿ ಅಶಾಂತಿ ಧರ್ಮ ಧರ್ಮಗಳಲ್ಲಿ ಜಾತಿಗಳಲ್ಲಿ ವೈಶಮ್ಯ ಮೌಢ್ಯತೆ, ಅಸ್ಪಶ್ಯತೆ ಇನ್ನು ಜೀವಂತವಾಗಿರುವುದು ಅತ್ಯಂತ ಹೇಯ ವಿಷಯವಾಗಿದೆ ಎಂದು ತಮ್ಮ ನೋವನ್ನು ನ್ಯಾಯಧೀಶರು ವ್ಯಕ್ತಪಡಿಸಿದರು.

          ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ ಆರೋಗ್ಯ ನೀಡಬೇಕು. ಯಾರು ಸಹ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಶಿಕ್ಷಣ ಪಡೆದರೆ ಸಂವಿಧಾನದಲ್ಲಿ ರೂಪಿಸಿರುವ ಹಕ್ಕು ಸಮಾನತೆ ಕಾನೂನು ಅರಿವು ಗೊತ್ತಾಗುತ್ತದೆ. ಈ ತಾರತಮ್ಯಗಳು ಸಂಪೂರ್ಣವಾಗಿ ನಿರ್ಮಲನೆಯಾದರೆ ಮಾತ್ರ 3 ವರ್ಷಗಳ ಕಾಲ ಡಾ.ರಾಜೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಿಧಾನ ರಚಿಸಿದ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಾಧನೆಗೆ ಗೌರವ ಬರುತ್ತದೆ ಎಂದು ನ್ಯಾಯಾಧೀಶರು ಆಶಯ ವ್ಯಕ್ತಪಡಿಸಿದರು.

         ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್ ವಹಿಸಿ ಮಾತನಾಡಿಸಂವಿಧಾನ ರಚನೆಯಲ್ಲಿ 12ನೇ ಶತಮಾನದಲ್ಲಿ ವಚನಾಕಾರರು ತಿಳಿಸಿರುವಂತೆ ನಮ್ಮ ಸಂವಿಧಾನ ಅದೇ ಮಾರ್ಗದಲ್ಲಿ ರಚಿತವಾಗಿದೆ. ನಮ್ಮ ಸಂವಿಧಾನ ಒಂದು ನಿಘಂಟು ಅದರ ಪರಿಪಾಲನೆಯನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಕರೆ ನೀಡಿದರು.

       ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ, ಉಪಾಧ್ಯಕ್ಷ ಆರ್.ಜಗದೀಶ್, ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ಅನಾಥ ಸೇವಾಶ್ರಮದ ಡಾ. ರಾಜಶೇಖರ್, ಪ್ರಾಚಾರ್ಯ ಶಿವಕುಮಾರ್ ಉಪಸ್ಥಿತರಿದ್ದರು.ಸಿವಿಲ್ ನ್ಯಾಯಾಧೀಶರಾದ ವಿ.ರವಿಕುಮಾರ್ ಸ್ವಾಗತಿಸಿದರು. ವಕೀಲ ವಿಜಯ್ ಕುಮಾರ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap