ಮಧುಗಿರಿ:
ಟೌನ್ ರಿಕ್ರೀಯೇಷನ್ ಕ್ಲಬ್‍ನಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಚಟುವಟಿಕೆಗಳ ನಡೆಯುತ್ತಿದ್ದು ಕಬ್ಲ್ ಮುಚ್ಚುವಂತೆ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಒತ್ತಾಯಿಸಿದ್ದಾರೆ.
ಪಟ್ಟಣದ ಹೈಸ್ಕೂಲ್ ರಸ್ತೆಯ ಸಮೀಪವಿರುವ ಕನ್ನಡ ಜಾಗೃತಿ ವೇದಿಕೆಯ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಇಲ್ಲಿನ ರಿಕ್ರೀಯೇಷನ್ ಕ್ಲಬ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳದೆ ತಮ್ಮ ಸಂಘದ ನಿಯಾಮಾವಳಿಗಳಂತೆ ನಡೆದುಕೊಳ್ಳದೆ ಮೋಜು-ಮಸ್ತಿ ತಾಣವಾಗಿ ಮಾರ್ಪಟ್ಟಿದೆ. ಪಟ್ಟಣದ ಪ್ರಭಾವಿ ಮುಖಂಡರುಗಳೇ ಇಲ್ಲಿ ಅನೇಕ ಬಾರಿ ಹೊಡೆದಾಡಿಕೊಂಡಿರುವ ಬಗ್ಗೆ ಮಧುಗಿರಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಇಂತಹ ಕ್ಲಬ್‍ಗಳು ಸಮಾಜಕ್ಕೆ ಮಾರಕ ಎಂದರು.
ಕನ್ನಡ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಕೇಬಲ್ ಸುಬ್ಬು ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕ್ಲಬ್‍ಗಳನ್ನು ಮುಚ್ಚುವಂತೆ ಆದೇಶ ಮಾಡಿದ ಹಿನ್ನಲೆಯಲ್ಲಿ ರಾಜ್ಯದ ಬಹುತೇಕ ಭಾಗದಲ್ಲಿ ಅಕ್ರಮ ಕ್ಲಬ್‍ಗಳು ಮುಚ್ಚಿದ್ದರು ಸಹ ಪಟ್ಟಣದ ರಿಕ್ರಿಯೇಷನ್ ಕ್ಲಬ್‍ನ ಬಾಗಿಲು ತೆಗೆಯಲಾಗುತ್ತಿದೆ ಈ ಕಬ್ಲ್‍ನ ಅಧ್ಯಕ್ಷರು ಉಪವಿಭಾಗಾಧಿಕಾರಿಳಾಗಿದ್ದು, ಕಬ್ಲ್‍ನ ವಿರುದ್ದ ಕ್ರಮಕೈಗೊಂಡು ಆಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.
ಕರವೇ ಅಧ್ಯಕ್ಷ ಶಿವಕುಮಾರ್.ಎ. ಮಾತನಾಡಿ, ಟೌನ್ ರಿಕ್ರಿಯೇಷನ್ ಕ್ಲಬ್ ನಲ್ಲಿ ಕ್ರೀಡಾ ಚಟುವಟಿಕೆಗಳು ಮತ್ತು ಮನರಂಜನೆಯ ಕಾರ್ಯಗಳು ನಡೆಯದೆ ನಿತ್ಯವೂ ಜೂಜು ನಡೆಯುತ್ತಿದೆ ಕ್ಲಬ್ ಬಗ್ಗೆ ಸಂಭಂಧಪಟ್ಟವರು ಗಮನಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ಕಾರ್ಯದರ್ಶಿ ಮಂಜುನಾಥ್ ನಾಯ್ಕ್, ಪದಾಧಿಕಾರಿಗಳಾದ ಬಾಬು ಸಿ.ಜೆ.ಸುರೇಶ್ ಇತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ