ತುಮಕೂರು
ಗುತ್ತಿಗೆದಾರರ ಅಜಾಗರೂಕತೆಯಿಂದ ಕಾಮಗಾರಿ ಮಾಡುವ ವೇಳೆಯಲ್ಲಿ ವಿದ್ಯುತ್ ಶಾಕ್ ತಗುಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಗರ 12ನೆ ಕ್ರಾಸ್‍ನಲ್ಲಿ ನಡೆದಿದೆ.
ನಗರದಲ್ಲಿ ನಡೆಯುತ್ತಿರುವ ಮೆಘಾ ಗ್ಯಾಸ್ ಲೈನ್ ಕಾಮಗಾರಿಯ ಭಾಗವಾಗಿ ಶ್ರೀನಗರ 12ನೇ ಕ್ರಾಸ್‍ನಲ್ಲಿ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿ ಮಾಡಲಾಗುತ್ತಿದೆ. ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಮಂಜು (25 ವರ್ಷ) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು, ಆತನ ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ಘಟನೆ ಹಿನ್ನೆಲೆ
ಕಳೆದ ಒಂದು ತಿಂಗಳ ಮುಂಚೆ ಹೆಬ್ಬೂರು ಬಳಿಯಲ್ಲಿ ಕೆಲಸ ಮಾಡಲಾಗುತ್ತಿತ್ತು. ಅಲ್ಲಿ ಕೆಲಸ ಮುಗಿದಿದೆ ಎಂಬ ಕಾರಣಕ್ಕೆ ಕ್ಯಾತ್ಸಂದ್ರ ಬಳಿಯ ಶ್ರೀನಗರದಲ್ಲಿ ಗ್ಯಾಸ್ ಲೈನ್‍ಗಾಗಿ ಹಳ್ಳ ತೆಗೆಯಲು ಬಂದಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಳ್ಳ ತೆಗೆಯುವಾಗ ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಕೇಬಲ್ ಮೇಲೆ ಗುದ್ದಲಿ ಬೀಳುತ್ತಿದ್ದಂತೆ ವಿದ್ಯುತ್ ಹರಿದಿದೆ. ಪಕ್ಕದಲ್ಲಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಮಾಹಿತಿ ನೀಡಿದ ಕೂಲಿ ಕಾರ್ಮಿಕರು ಈ ಕಾಮಗಾರಿಯನ್ನು ಪ್ರಕಾಶ್ ಮತ್ತು ಯೋಗೇಶ್ ಎಂಬ ಗುತ್ತಿಗೆದಾರರು ಶಿರಾ ಮೂಲದ ಕಾರ್ಮಿಕರನ್ನು ಬಳಸಿಕೊಂಡು ಮಾಡಿಸುತ್ತಿದ್ದು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ