ಚಳ್ಳಕೆರೆ;
ಚಳ್ಳಕೆರೆಯಮ್ಮ ದೇವಸ್ಥಾನ ಹಿಂಭಾಗದ ಅಜ್ಜಯ್ಯ ಗುಡಿ ರಸ್ತೆ ಎ.ಸಿ ಗೋಡನ್ ಬಳಿ ಬುಧವಾರ ಬೆಳಿಗ್ಗೆ 9 : 30 ಗಂಟೆಗೆ ಪಡಿತರ ಅಕ್ಕಿ ತುಂಬಿದ್ದ ಲಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ರಾಜಸ್ಥಾನ ಮೂಲದ ಭಾನುಸಿಂಗ್ (25) ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.
ಭೂಂ ಸಿಂಗ್, ವೀರಂಸಿಂಗ್ ಎಂಬುವವರಿಗೆ ಗಂಭೀರವಾಗಿ ಗಾಯಗಳಾಗಿದ್ದು ಅವರನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜಸ್ಥಾನ ಮೂಲದವರಾದ ಇವರೆಲ್ಲರೂ ಬಡಗಿ ವೃತ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಚಳ್ಳಕೆರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.