ತಿಪಟೂರು
ಅತಿವೇಗವಾಗಿ ವಾಹನವನ್ನು ಹಿಂದೆಹಾಕುವ ಬರದಲ್ಲಿ ಎದುರಿನಿಂದ ಬರುತ್ತಿದ್ದು ಆಕ್ಟಿವ್ ಹೊಂಡಾಕ್ಕೆ ಡಿಕ್ಕಿಹೊಡೆದ ರಭಸಕ್ಕೆ ಓರ್ವ ಮೃತಪಟ್ಟಿರುವ ಘಟನೆ ನೊಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.
ಭಾನುವಾರ ಬೆಳಗ್ಗೆ 11.00 ಗಂಟೆಯಲ್ಲಿ ತಿಪಟೂರಿನಿಂದ ತುರುವೇಕೆರೆ ಕಡೆಗೆ ಹೋಗುತ್ತಿದ್ದ ದ್ವಿಚಕ್ರವಾಹನ ಸಿ.ಟಿ.100 ಕೆ.ಎ. 44 ವಿ 1567 ವಾಹನವನ್ನು ಹಿಂದೆ ಹಾಕುವ ಬರದಲ್ಲಿ ತುರುವೇಕೆರೆಯಿಂದ ತಿಪಟೂರು ಕಡೆಗೆ ಬರುತ್ತಿದ್ದ ಆಕ್ಟಿವ್‍ಹೋಂಡ ಕೆ.ಎ 44 ವಿ 2436 ವಾಹನಕ್ಕೆ ಡಿಕ್ಕಿಹೊಡೆದ ರಭಸಕ್ಕೆ ಸಿ.ಟಿ 100 ಸವಾರ ದಾದಾಪೀರ್ ಸ್ಥಳದಲ್ಲೇ ಮೃತಪಟ್ಟಿದ್ದು, ಆಕ್ಟಿವ್ ಹೋಂಡಾ ಸವಾರ ನವೀನ್ ತಲೆಗೆ ಪೆಟ್ಟು ಬಿದ್ದಿದ್ದು ಆತನನ್ನು ಖಾಸಗಿ ವಾಹನದಲ್ಲಿ ನೊಣವಿಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಡವಾಗಿ ಬಂದ ಆಂಬುಲೆನ್ಸ್ : ಅಪಘಾತದಲ್ಲಿ ಗಾಯಾಳು ಬಿದ್ದಿರುವುದನ್ನು ನೋಡಿದ ಸ್ಥಳೀಯರು ಅವನನ್ನು ಪಕ್ಕಕ್ಕೆ ಕೂರಿಸಿ ನೀರುಕೊಟ್ಟು ಮಾನವೀಯತೆ ಮೆರೆದರು ಮತ್ತು ತಕ್ಷಣವೇ ಆಂಬುಲೆನ್ಸ್‍ಗೆ ಕರೆಮಾಡಿ ಗಂಟೆಕಳೆದರೂ ಆಂಬುಲೆನ್ಸ್ ಬರೆದಿದ್ದನ್ನು ಕಂಡು ಖಾಸಗಿ ವಾಹನದಲ್ಲೆ ನೊಣವಿನಕೆರೆಯ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಕರೆದಕೊಂಡು ಹೋದ ಅರ್ಧಗಂಟೆಗೆ ಆಂಬುಲೆನ್ಸ್ ಬಂದು ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುವನ್ನು ಕರೆದುಕೊಂಡು ಹೋದರು.