ಮುಂದಿನ ವಾರದೊಳಗೆ ಒಂದು ಲಕ್ಷ ರೈತರಿಗೆ ಋಣಮುಕ್ತ ಪತ್ರ: ದಿನೇಶ್ ಗುಂಡೂರಾವ್

ಬೆಂಗಳೂರು

      ಮೈತ್ರಿ ಸರ್ಕಾರ ಜಾರಿಗೆ ತಂದಿರುವ ಸಾಲಮನ್ನಾ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಪಹಾಸ್ಯ ಮಾಡುತ್ತಿದ್ದಾರೆ. ಸಾಲಮನ್ನಾ ಕಾರ್ಯಕ್ರಮ ಘೋಷಿಸಿ 65 ಸಾವಿರ ರೈತರಿಗೆ ಋಣಮುಕ್ತ ಪತ್ರವನ್ನು ಹಂಚಿಕೆ ಮಾಡಲಾಗಿದೆ.ಮುಂದಿನ ವಾರದೊಳಗೆ ಒಂದು ಲಕ್ಷ ರೈತರಿಗೆ ಋಣಮುಕ್ತ ಪತ್ರ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

       ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿಯವರಿಗೆ ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕ ಸಭೆಯಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಾಲಮನ್ನಾ ಎಷ್ಟಾಗಿದೆ ಎಂಬುದರ ಬಗ್ಗೆ ಮಾಹಿತಿ ಬೇಕೆಂದರೆ ರಾಜ್ಯಕ್ಕೆ ಎರಡು ಗಂಟೆಗಳು ಪ್ರಧಾನಿಯವರು ಬಂದು ಪರಿಶೀಲನೆ ನಡೆಸಲಿ ಎಂದು ದಿನೇಶ್ ಗುಂಡೂರಾವ್ ಸವಾಲು ಹಾಕಿದರು.

          ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಸುಳ್ಳು ಹೇಳಿಕೊಂಡು ದೇಶಾದ್ಯಂತ ತಿರುಗಾಡುತ್ತಿದ್ದಾರೆ. ರೈತರ ಸಾಲಮನ್ನಾ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡಿಲ್ಲ.ಪ್ರಧಾನಿ ಮೋದಿ ಸುಳ್ಳಿನ ಸರದಾರರಾಗಿದ್ದಾರೆಂದು ಕೇಂದ್ರದ ವಿರುದ್ದ ಕಿಡಿಕಾರಿದರು. ಕೇಂದ್ರ ಸರ್ಕಾರ ನಾಲ್ಕೂವರೆ ವರ್ಷದಲ್ಲಿ ಮಾಡಿದ್ದು ಏನೇನು ಇಲ್ಲ,
ಮಹದಾಯಿ ವಿಚಾರದಲ್ಲೂ ರಾಜ್ಯಕ್ಕೆ ಪ್ರಧಾನಿ ಸಹಕಾರ ನೀಡಲಿಲ್ಲ.ಸಾಲಮನ್ನಾ ಯೋಜನೆಯನ್ನು ಲಾಲಿಪಾಪ್ ಗೆ ಹೋಲಿಸ್ತಾರೆ, ಇವರ ಮನಸ್ಥಿತಿ ಎಂತಹದ್ದು ಯೋಚನೆಮಾಡಿ, ಇಂತಹ ನೀತಿಗೆಟ್ಟ,ಕೀಳುಮಟ್ಟದ ಪ್ರಧಾನಿಯನ್ನು ನಾವೆಂದೂ ನೋಡಿಲ್ಲವೆಂದು ದಿನೇಶ್ ಗುಂಡುರಾವ್ ಲೇವಡಿ ಮಾಡಿದರು.

        ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೂಟಾಟಿಕೆಗೆ ಸಾಲಮನ್ನಾ ಹೇಳಿಕೆ ನೀಡಿಲ್ಲ.ಎಐಸಿಸಿ ಅಧ್ಯಕ್ಷರ ಸೂಚನೆಯಂತೆ ರಾಜಸ್ತಾನ, ಛತ್ತೀಸಗಡ್, ಮಧ್ಯಪ್ರದೇಶದಲ್ಲಿ ಸಾಲಮನ್ನಾ ಮಾಡಿದ್ದೇವೆ. ರಾಹುಲ್ ಗಾಂಧಿಯವರ ಕಳಕಳಿ ಏನು ? ಪ್ರಧಾನಿ ಮೋದಿಯವರ ಕಳಕಳಿ ಏನು.ಪ್ರಧಾನಿಯವರ ಮಾತುಗಳನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link