ತುಮಕೂರು
ಆಂಧ್ರಪ್ರದೇಶದಿಂದ ಗಾಂಜಾವನ್ನು ಅಕ್ರಮವಾಗಿ ತುಮಕೂರು ನಗರಕ್ಕೆ ತರಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುವ ದಂದೆಯಲ್ಲಿ ತೊಡಗಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸುವಲ್ಲಿ ತುಮಕೂರಿನ ಕ್ಯಾತಸಂದ್ರ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ ಸುಮಾರು 1 ಲಕ್ಷ ರೂ. ಮೌಲ್ಯದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರು ನಗರದ ಕ್ಯಾತಸಂದ್ರದ ಸಂಜಯ್‍ನಗರದ ಬಳಿ ಇರುವ ಟ್ರಕ್ ಟರ್ಮಿನಲ್‍ನ ಉದ್ಯಾನವನದ ಹತ್ತಿರ ಸೆ.9 ರಂದು ಮಧ್ಯಾಹ್ನ 1-15 ರಲ್ಲಿ ಕ್ಯಾತಸಂದ್ರ ಪೊಲೀಸರು ದಾಳಿ ನಡೆಸಿದಾಗ ಗಾಂಜಾ ಸೊಪ್ಪಿನ ಸಮೇತ ಮೂವರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ಕೆ.ವಂಶಿಕೃಷ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಕ್ಕಿಬಿದ್ದಿರುವ ಆರೋಪಿಗಳನ್ನು 1) ಸಿ.ಸುಮನ್ (35 ವರ್ಷ, ಕಾರು ಚಾಲಕನ ಕೆಲಸ, ಸ್ವಂತ ಊರು: ಭಕ್ತವತ್ಸಲಂ ಕಾಲೋನಿ, ಪೆರಂಬೂರು ರೈಲ್ವೆ ನಿಲ್ದಾಣದ ಹತ್ತಿರ, ಚೆನ್ನೆ`, ತಮಿಳುನಾಡು ರಾಜ್ಯ, ಹಾಲಿವಾಸ: ತಡಗು, ನಗರಿ ಮಂಡಲï, ಚಿತ್ತೂರು ಜಿಲ್ಲೆ. ಎ.ಪಿ.ರಾಜ್ಯ. ಹಾಲಿವಾಸ: ಎಳ್ಳಾರೆ ಬಂಡೆ, ಕ್ಯಾತ್ಸಂದ್ರ, ತುಮಕೂರು), 2) ರಿಜ್ವಾನ್ ಅಲಿಯಾಸ್ ರಿಜ್ವಾನ್ ಖಾನ್ (33 ವರ್ಷ, ಹಮಾಲಿ ಕೆಲಸ, ಗೂಡ್ಸ್ ಶೆಡ್ ಬಳಿ, ಕ್ಯಾತ್ಸಂದ್ರ, ತುಮಕೂರು, ಹಾಲಿ ವಾಸ: ಚೋಳಂಬಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು) ಮತ್ತು 3) ಚಾಂದ್ ಪಾಷ ಅಲಿಯಾಸ್ ಮೊಹಮದ್ ಚಾಂದ್ ಪಾಷ (44 ವರ್ಷ, ಟೀ ಅಂಗಡಿಯಲ್ಲಿ ಕೆಲಸ, ವಾಸ: ಡಿ.ಎಸ್.ಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು) ಎಂದು ಗುರುತಿಸಲಾಗಿದೆ.
ಈ ಮೂವರು ಆರೋಪಿಗಳಿಂದ ಒಟ್ಟು 4 ಕೆ.ಜಿ. 265 ಗ್ರಾಂ ನಷ್ಟು ಗಾಂಜಾ ಸೊಪ್ಪನ್ನು ಮತ್ತು ಒಂದು ಮೋಟಾರ್ ಬೈಕನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಒಟ್ಟು ಸುಮಾರು 1 ಲಕ್ಷ ರೂಗಳೆಂದು ಅಂದಾಜಿಸಲಾಗಿದೆ. ಇವರುಗಳು ಆಂಧ್ರಪ್ರದೇಶದಿಂದ ಗಾಂಜಾ ಸೊಪ್ಪನ್ನು ಇಲ್ಲಿಗೆ ತರಿಸಿಕೊಂಡು ಇಲ್ಲಿನ ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಮತ್ತು ಇತರೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರೆಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಪ್ರಕರಣವನ್ನು ಪತ್ತೆ ಮಾಡಲು ಎಸ್ಪಿ ಡಾ. ಕೆ. ವಂಶಿಕೃಷ್ಣ ಹಾಗೂ ಅಡಿಷನಲ್ ಎಸ್ಪಿ ಟಿ.ಜೆ. ಉದೇಶ್ ಅವರ ಮಾರ್ಗದರ್ಶನದಲ್ಲಿ ತುಮಕೂರು ನಗರ ಉಪವಿಭಾಗದ ಡಿವೈಎಸ್ಪಿ ಎಚ್.ಜೆ.ತಿಪ್ಪೇಸ್ವಾಮಿ ಹಾಗೂ ಕ್ಯಾತ್ಸಂದ್ರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಎಸ್. ಶ್ರೀಧರ್ ರವರ ನೇತೃತ್ವದಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರಾಮಪ್ರಸಾದ್ ಮತ್ತು ಠಾಣೆಯ ಸಿಬ್ಬಂದಿಯವರುಗಳಾದ ಎ.ಎಸ್ಸೆ` ಆರ್.ಎಸ್. ಸಿದ್ದಪ್ಪ , ಹೆಡ್ ಕಾನ್ಸ್‍ಟೆಬಲ್‍ಗಳಾದ ಮೋಹನ್ ಕುಮಾರ್, ಲೋಕೇಶ್ ಬಾಬು, ಮಂಜುನಾಥ್, ಪೊಲೀಸ್ ಕಾನ್ಸ್‍ಟೆಬಲ್‍ಗಳಾದ ಕಿರಣ್, ಮಂಜುನಾಥ್, ರಮೇಶ್, ಸೈಯದ್ ರಿಫಾತ್ ಅಲಿ, ಮನು ಹಾಗೂ ಚಾಲಕರುಗಳಾದ ದಿಲೀಪ್ ಮತ್ತು ರುದ್ರನಾಯ್ಕ ಅವರುಗಳು ಶ್ರಮಿಸಿದ್ದಾರೆ. ಯಶಸ್ವೀ ತನಿಖೆ ನಡೆಸಿರುವ ಪೊಲೀಸರ ತಂಡವನ್ನು ಎಸ್ಪಿ ಡಾ. ವಂಶಿಕೃಷ್ಣ ಅವರು ಪ್ರಶಂಸಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ