ಬೆಂಗಳೂರು
ಕಾರುಗಳ್ಳರು ಬೈಕ್‍ಗಳ್ಳರು ಗಮನ ಬೆರೇಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಖದೀಮರು ಸೇರಿ 10 ಮಂದಿ ರಾಜ್ಯ ಆಂತರಾಜ್ಯ ಕಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು 15 ಕಾರುಗಳು, 49 ದ್ವಿಚಕ್ರ ವಾಹನಗಳು 800 ಗ್ರಾಂ ಚಿನ್ನಾಭರಣಗಳು ಸೇರಿ 1 ಕೋಟಿ 68 ಲಕ್ಷದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರಿನ ಕೀ ಯನ್ನು ಟ್ಯಾಬ್‍ನ ತಂತ್ರಜ್ಞಾನ ಬಳಸಿ, ಲಾಕ್ ತೆಗೆದು ಕಳವು ಮಾಡಿ ಮೋಜು ಮಾಡುತ್ತಿದ್ದ ತಮಿಳುನಾಡಿನ ವೆಲ್ಲೂರಿನ ಬಾಬು ಹಾಗೂ ಚೆನ್ನೈನ ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂನನ್ನು ಬಂಧಿಸಿ, ಒಂದು ಕೋಟಿ ರೂ. ಮೌಲ್ಯದ 15 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ 3, ಸೂರ್ಯಸಿಟಿಯಲ್ಲಿ 5, ಕೋರಮಂಗಲ, ಚೆನ್ನೈ ತಲಾ 1, ಹೆಬ್ಬಗೋಡಿಯಲ್ಲಿ 2 ಸೇರಿದಂತೆ, 15 ಕಾರುಗಳನ್ನು ಕಳವು ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳವು ಮಾಡಿದ್ದ ಕಾರುಗಳನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ, ಮಾರಾಟ ಮಾಡಿ ಆರೋಪಿಗಳು ಮೋಜು ಮಾಡುತ್ತಿದ್ದು, 13 ವಾಹನಗಳ ಮಾಲೀಕರು ಪತ್ತೆಯಾದರೆ, ಇನ್ನೆರಡು ವಾಹನಗಳ ಮಾಲೀಕರುಗಳನ್ನು ಪತ್ತೆಹಚ್ಚಬೇಕಾಗಿದೆ ಎಂದರು.
ಗಮನ ಬೇರೆಡೆ ಸೆಳೆದು ಕಳವು
ಕಾರು ಕಳ್ಳರ ಜೊತೆಗೆ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ 10 ಪ್ರಕರಣಗಳು ಬೇಧಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ತಮಿಳುನಾಡಿನ ತಿರಪ್ಪತ್ತೂರಿನ ಶಬರಿ (38), ಜೋಲಾರ್ ಪೇಟೆಯ ಬಾಲಾಜಿ (49), ಸುಭಾಷ್ (20) ಸೇರಿ ಮೂವರನ್ನು ಬಂಧಿಸಿ ಗಮನ ಬೇರೆಡೆ ಸೆಳೆದು ಕಳವು ಮಾಡಿದ್ದ 28 ಲಕ್ಷ ರೂ. ಮೌಲ್ಯದ 800 ಗ್ರಾಂ. ಚಿನ್ನಾಭರಣ, 2.5 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬಂಧನದಿಂದ ಹುಳಿಮಾವು 2, ಎಲೆಕ್ಟ್ರಾನಿಕ್ ಸಿಟಿಯ 8 ಸೇರಿದಂತೆ, 10 ಪ್ರಕರಣಗಳು ಪತ್ತೆಯಾಗಿವೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದ್ದ ಮಹಿಳೆಯೊಬ್ಬರ ಮುಖಕ್ಕೆ ಮಂದ ಆವರಿಸುವ ಪುಡಿ ಎರಚಿ, ಬ್ಯಾಗ್‍ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ದಾಖಲಿಸಿದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದಾರೆ ಎಂದು ವಿವರಿಸಿದರು.