ಬೆಂಗಳೂರು:
ಕೆಲ ದಿನಗಳ ಹಿಂದೆ ವಿಧಾನಸೌಧದ ಶೌಚಾಲಯದಲ್ಲಿ ನಡೆದಿದಿದ್ದ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಕರ್ತವ್ಯದಲ್ಲಿದ್ದ 10 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪೊಲೀಸ ಇಲಾಖೆ ಅಮಾನತ್ತಿಗೆ ಕಾರಣವಾಗಿ ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಿಎಸ್‌ಐ ಮಹದೇವ, ಎಎಸ್‌ಐ ಶಿವಲಿಂಗಯ್ಯ, ಮುಖ್ಯಪೇದೆ ಜಕಾರಿಯಾಸ್, ಪೇದೆಗಳಾದ ಯಲ್ಲಪ್ಪ, ಕೆನೆತ್, ಸವಿತಾ ಹಲಕಾವಟಗಿ, ಸೀಮಾ, ಲಕ್ಷ್ಮಮ್ಮ, ಆನಂದನಾಯಕ್, ಎಂ.ನಿವೇದಿತಾರನ್ನು ಅಮಾನತು ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ರೇವಣ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ. ಶೌಚಗೃಹದಲ್ಲಿ ಕೈ, ಕತ್ತಿನ ಭಾಗದಿಂದ ರಕ್ತ ಸೋರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೇವಣ ಕುಮಾರ್. ಯಾವುದೇ ಪಾಸ್, ಐಡಿ ಕಾರ್ಡ್ ಇಲ್ಲದೆ ಅನಧಿಕೃತವಾಗಿ ಎಂಟ್ರಿಯಾಗಿದ್ದ ರೇವಣ ಕುಮಾರ್.ಪ್ರವೇಶ ಸಂದರ್ಭ ಪರಿಶೀಲನೆ ಮಾಡುವಲ್ಲಿ ಕರ್ತವ್ಯ ಲೋಪ ಎಸಗಿದ್ದ ಪೊಲೀಸ್ ಸಿಬ್ಬಂದಿ. ವಿಧಾನಸೌಧದ ಅಂಬೇಡ್ಕರ್ ದ್ವಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ. ಪ್ರೊಬೆಷನರಿ ಮಹಿಳಾ ಸಿಬ್ಬಂದಿಯೂ ಸಸ್ಪೆಂಡ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








