ಬೆಂಗಳೂರು
ಕಳಾಸಿಪಾಳ್ಯ ಹಾಗೂ ಆಶೋಕನಗರಲ್ಲಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಎರಡು ಬಾರ್‍ಗಳ ಮೇಲೆ ಪ್ರತ್ಯೇಕ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 78 ಮಹಿಳೆಯರನ್ನು ರಕ್ಷಿಸಿ 100 ಮಂದಿ ಗ್ರಾಹರನ್ನು ವಶಕ್ಕೆ ಪಡೆದುಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುರುಗೇಶ್ ಪಾಳ್ಯದ ಬ್ರಿಗೇಡ್ ರಸ್ತೆಯಲ್ಲಿರುವ ಬ್ರಿಗೇಡ್ ನೈಟ್ ಬಾರ್ ಅಂಡ್ ರೆಸ್ಟೋರೆಂಟ್‍ನ ಸಿಬ್ಬಂದಿಯಾದ ಅಶೋಕ್ ಶೆಟ್ಟಿ (38), ಮದ್ದೂರಿನ ಸಚಿನ್ (22),ಹಾಗೂ ನೈಟ್ ಕ್ವೀನ್ ಬಾರ್ ಅಂಡ್ ರೆಸ್ಟೋರೆಂಟ್‍ನ ಮೋಹನ್ (24) ಬಂಧಿತ ಆರೋಪಿಗಳಾಗಿದ್ದಾರೆ.ಅವರ ಜೊತೆ ವಶಪಡಿಸಿಕೊಂಡಿರುವ 100 ಮಂದಿ ಗ್ರಾಹಕರನ್ನು ವಿಚಾರಣೆ ನಡೆಸಲಾಗಿದೆ.
ಬಂಧಿತರಿಂದ 4,25,000 ನಗದು, ಸೌಂಡ್ ಸಿಸ್ಟಂಗಳು, ಕಂಪ್ಯೂಟರ್‍ಗಳು ಇನ್ನಿತರ ವಸ್ತುಗಳನ್ನು
ವಶಪಡಿಸಿಕೊಳ್ಳಲಾಗಿದೆ.ಅಶೋಕ್ ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಬ್ರಿಗೇಡ್ ನೈಟ್ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಕಲಾಸಿಪಾಳ್ಯದ ನೈಟ್ ಕ್ವೀನ್ ಬಾರ್ ಅಂಡ್ ರೆಸ್ಟೋರೆಂಟ್‍ಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿ 100 ಮಂದಿ ಗಿರಾಕಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.
ಡ್ಯಾನ್ಸ್ ಬಾರ್‍ಗೆ ಬರುವ ಗಿರಾಕಿಗಳ ಜೊತೆ ನೃತ್ಯ ಮಾಡಲು ಇರಿಸಿಕೊಂಡಿದ್ದ ಹೊರ ರಾಜ್ಯದ 78 ಮಂದಿ ಮಹಿಳೆಯರನ್ನು ರಕ್ಷಿಸಿ ಅಶೋಕ್ ನಗರ ಹಾಗೂ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಕೆಲವು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ. ಎರಡೂ ಬಾರ್‍ಗಳಲ್ಲಿಯೂ ಅಕ್ರಮವಾಗಿ ಡ್ಯಾನ್ಸ್ ನಡೆಸಿ ವಂಚಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.