ಹುಳಿಯಾರು
ಹುಳಿಯಾರಿನ ಶ್ರೀ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಸದಸ್ಯತ್ವ ಪ್ರಸ್ತುತ 500 ಗಳಿದ್ದು ಇದನ್ನು ಈ ವರ್ಷ 1 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಗಂಗಯ್ಯ ಅವರು ತಿಳಿಸಿದರು.
ಹುಳಿಯಾರಿನ ಎಸ್‍ಬಿಐ ಎದುರಿಗಿನ ಕೆಂಪೇಗೌಡ ಸಹಕಾರ ಸಂಘದ ಕಚೇರಿಯಲ್ಲಿ 2019ರ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘ ಕಳೆದ ವರ್ಷ 21 ಲಕ್ಷ ರೂ. ವ್ಯವಹಾರ ನಡೆಸಿ 37 ಸಾವಿರ ರೂ. ಲಾಭ ಗಳಿಸಿದೆ. ಈ ವರ್ಷ ಇದನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಿದ್ದು ಸಾಮಾಜಿಕ ಕೆಲಸ-ಕಾರ್ಯದಲ್ಲೂ ತೊಡಗಿಕೊಳ್ಳುವ ಚಿಂತನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಹಿರಿಯ ನ್ಯಾಯವಾದಿ ಶ್ರೀನಿವಾಸಮೂರ್ತಿ ಅವರು ಮಾತನಾಡಿ ಇಂದು ಜಾತಿ ಸಂಘಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಇನ್ನೊಬ್ಬರ ಅಣತಿಯಂತೆ ಸಂಘಟನೆ ಆಗುವುದರ ಬದಲು ಸಂವಿಧಾನಿಕ ಹಕ್ಕು ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಸಂಘಟನೆಯಾಗಿ ಸ್ವಾರ್ಥ, ಸಂಕುಚಿತ, ನಾನತ್ವ ಬಿಟ್ಟು ಸಂಘಗಳನ್ನು ಬೆಳೆಸಿದರೆ ಏಳಿಗೆ ಸಾಧ್ಯ ಎಂದ ಅವರು, ಸೇಠುಗಳು ತಮ್ಮವರನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ವ್ಯಾಪಾರಕ್ಕೆ 3 ಬಾರಿ ಬಡ್ಡಿ ರಹಿತ ಸಾಲ ನೀಡುತ್ತಾರೆ. ಈ ರೀತಿ ಜಾತಿ ಸಂಘಟನೆಗಳು ತಮ್ಮತಮ್ಮ ಜಾತಿಯಲ್ಲಿ ಕೆಳಗಿರುವವರನ್ನು ಮೇಲಕ್ಕೆತ್ತಬೇಕಿದೆ ಎಂದು ಸಲಹೆ ನೀಡಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ