ಕಸಾಪದ 104ನೇ ಸಂಸ್ಥಾಪನಾ ದಿನಾಚರಣೆ

ತುರುವೇಕೆರೆ:

        ಸಾಂಸ್ಥಿಕ ಚುನಾವಣಾ ಸಮಯದಲ್ಲಿ ಸಾಹಿತ್ಯ ಪರಿಷತ್ತಿನ ಬಗ್ಗೆ ಮೂಡುವ ಕಾಳಜಿ, ಕಳಕಳಿ ಕನ್ನಡಿಗರಲ್ಲಿ ಸದಾ ಕಾಲ ಜಾಗೃತವಾಗಿರಬೇಕು. ಆಗಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಗಳಾದ ಭಾಷೆ, ಸಾಹಿತ್ಯ,ಸಂಸ್ಕøತಿಯ ಸರ್ವತೋಮುಖ ಬೆಳವಣಿಗೆ ಹಾಗೂ ಕನ್ನಡದ ಸ್ಥಾನ ಮಾನ ಕಾಪಾಡಲು ಸಾಧ್ಯ ಎಂದು ಕಸಾಪದ ಮಾಜಿ ಅಧ್ಯಕ್ಷ ಎಸ್.ಯೋಗಾನಂದ್ ಅಭಿಪ್ರಾಯಪಟ್ಟರು

       ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುವತಿಯಿಂದ 104ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಒಂದಿಷ್ಟು ಸಮಯವನ್ನು ಮೀಸಲಿಡಬೇಕು.ಅದೊಂದು ಬದ್ಧತೆಯಾಗಬೇಕು. ಆದರೆ ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಆಕರ್ಷಣೆ ನಮ್ಮ ಸೃಜನಾತ್ಮಕ ಕಾರ್ಯಗಳಿಗೆ ಅಡ್ಡಿಯಾಗಿದೆ.

        ಅದನ್ನು ಮೀರಿ ನಾವು ಬೆಳೆಯಬೇಕು ಎಂದು ಸಲಹೆ ನೀಡಿದರು ವಿಶೇಷ ಉಪನ್ಯಾಸ ನೀಡಿದ ಬರಹಗಾರ ತುರುವೇಕೆರೆಪ್ರಸಾದ್ ಮಾತನಾಡಿ ಸಾಹಿತಿ ಮತ್ತು ಸಾಹಿತ್ಯಪರ ಸಂಘಟನೆಗಳು ಜನ ತಾವಿದ್ದಲ್ಲಿಗೆ ಬರಲಿ ಎಂದು ನಿರೀಕ್ಷಿಸಬಾರದು. ಸಾಹಿತ್ಯವನ್ನು ಪರಿಷತ್ ಮೂಲಕ ಗ್ರಾಮೀಣ ಜನರಿಗೆ ತಲುಪಿಸುವ ಕಾರ್ಯವಾಗಬೇಕು. ಸಾಹಿತ್ಯ ಸ್ಥಾವರವಾಗಬಾರದು, ಅದು ಚಲನಶೀಲ ಜಂಗಮ ಸ್ವರೂಪ ಪಡೆಯಬೇಕು. ರಂಗಸಂಚಾರದಂತೆ ಸಾಹಿತ್ಯ ಸಂಚಾರ ಒಂದು ಸಂಚಾರೀ ಅಭಿಯಾನವಾಗಿ ಹಳ್ಳಿ ಹಳ್ಳಿಗಳನ್ನು ತಲುಪುವಂತಾಗಬೇಕು.

       ವಿಶೇಷವಾಗಿ ಮಹಿಳಾ ಲೇಖಕಿಯರನ್ನು ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದ ಅವರು ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ದಾರಿಯ ಬಗ್ಗೆ ಅವಲೋಕನ ನಡೆಸಿದರು.ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷರಾದ ದಂಡಿನಶಿವರದ ಗಂಗಾಧರಗೌಡ, ಎಸ್. ಯೋಗಾನಂದ್, ಮೂಡಲಪಾಯ ಯಕ್ಷಗಾನ ಭಾಗವತ ಕ.ನ.ದಾಸಾಚಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಧರ್ಣಪ್ಪರವರನ್ನು ಸನ್ಮಾನಿಸಲಾಯಿತು.

        ದಂಡಿನಶಿವರ ಕಸಾಪ ಅಧ್ಯಕ್ಷ ಭೋಜರಾಜ್, ಪಂಚಾಯತ್ ಕಾವಲು ಸಮಿತಿ ಅಧ್ಯಕ್ಷ ವೆಂಕಟೇಶ್, ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕ ಟಿ.ರಾಮಚಂದ್ರ, ಎಸ್.ಎಂ.ಕುಮಾರಸ್ವಾಮಿ, ಟಿ.ಎಂ.ಮಂಜುನಾಥ್ ಇತರರು ಉಪಸ್ಥಿತರಿದ್ದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಎಲ್.ವಿರೂಪಾಕ್ಷ, ಟಿ.ಎಸ್.ಕೃಷ್ಣ ಚೈತನ್ಯ, ಜ್ಯೋತಿ ಸುಂಕಲಾಪುರ, ವಿಶ್ವಾರಾಧ್ಯ, ತಂ.ಪಾ.ಚಂದ್ರಕೀರ್ತಿ, ಎಂ.ಮಂಜೇಶ್ ಇತರರು ಕವನ ವಾಚನ ಮಾಡಿದರು. ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ನಂ.ರಾಜು ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಸ್ವಾಗತಿಸಿದರು, ಸಿಆರ್‍ಪಿ ವೆಂಕಟೇಶ್ ವಂದಿಸಿದರು. ಶಿಕ್ಷಕ ಅಶೋಕ್ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap