ಚಿತ್ರದುರ್ಗ
ಆಯಸ್ಸು ಗಟ್ಟಿಯಾಗಿದ್ದರೆ ಜವರಾಯನೇ ಎದುರಿಗೆ ಬಂದರೂ ಏನೂ ಆಗಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಇದಕ್ಕೆ ತಾಜಾ ಉದಾಹರಣೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ ಸೋಂಕಿನ ವಿರುದ್ಧ 105 ವರ್ಷದ ಅಜ್ಜಿ ಸಿದ್ದಮ್ಮ ಗೆದ್ದಿರುವುದು.
ಕರೊನಾ ತೊಂದೊಡ್ಡುತ್ತಿರುವ ಸಾವು-ನೋವು ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಈ ನಡುವೆ ಅಲ್ಲಲ್ಲಿ ಶತಾಯುಷಿಗಳು ಕರೊನಾ ವಿರುದ್ಧ ಗೆದ್ದು ಬೀಗುತ್ತಿರುವ ಸುದ್ದಿಗಳು ಬುದುಕಿಗೆ ಜೀವ ಸೆಲೆಯಂತೆ ಗೋಚರಿಸುತ್ತಿವೆ. `ಕರೊನಾ ಅಪಾಯಕಾರಿ ರೋಗವಲ್ಲ, ವಿನಾಕಾರಣ ಭಯ ಬೇಡ. ಆದರೆ, ಎಚ್ಚರಿಕೆ ಇರಲಿ’ ಎಂಬುದುಕ್ಕೆ ಸಿದ್ದಮ್ಮ ಅಜ್ಜಿಯೇ ಸಾಕ್ಷಿ.
ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಎದುರಿಗೆ ಇರುವ ಪೊಲೀಸ್ ಕ್ವಾಟ್ರಸ್ ನಿವಾಸಿ 110 ವರ್ಷದ ಸಿದ್ದಮ್ಮ ಅವರಿಗೆ ಜು.27ರಂದು ಕರೊನಾ ಸೋಂಕು ದೃಢಪಟ್ಟಿತ್ತು. 28ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕೇ ದಿನದಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾದ ಸಿದ್ದಮ್ಮ ಅಜ್ಜಿಯನ್ನು ಇಂದು(ಶನಿವಾರ) ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಹೊಸದುರ್ಗ ತಾಲೂಕಿನ 97 ವರ್ಷದ ಅಜ್ಜಿ, ಬೆಂಗಳೂರಿನ 99 ವರ್ಷದ ಅಜ್ಜಿ, ಚಿತ್ರದುರ್ಗದಲ್ಲಿ 96 ವರ್ಷದ ಅಜ್ಜಿ, ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ 93 ವರ್ಷದ ವೃದ್ಧೆಯೊಬ್ಬರು ಇದಾಗಲೇ ಕರೊನಾದಿಂದ ಗುಣಮುಖರಾಗಿದ್ದನ್ನ ಸ್ಮರಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
