ಆಂಧ್ರಪ್ರದೇಶದಲ್ಲಿ 106 ಕೋಟಿ ರೂ ನಗದು ವಶ

ಅಮರಾವತಿ

     ಆಂಧ್ರಪ್ರದೇಶದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರ ನಂತರ ರಾಜ್ಯದಲ್ಲಿ 106 ಕೋಟಿ ರೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್ ಪಿ ಠಾಕೂರ್ ಹೇಳಿದ್ದಾರೆ.

      ಮುಖ್ಯ ಕಾರ್ಯದರ್ಶಿ ಎಲ್.ವಿ. ಸುಬ್ರಮಣ್ಯಂ ಏಪ್ರಿಲ್ 11 ರಂದು ನಡೆಯಲಿರುವ ಚುನಾವಣೆಗಾಗಿ ಮಾಡಲಾದ ಪೊಲೀಸ್ ವ್ಯವಸ್ಥೆಯನ್ನು ಪರಿಶೀಲಿಸಲು ಪೊಲೀಸರು, ಆದಾಯ ತೆರಿಗೆ ಮತ್ತು ಇತರ ಇಲಾಖೆಯ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪೊಲೀಸ್ ಮುಖ್ಯಸ್ಥ ಠಾಕೂರ್, ರಾಜ್ಯದಲ್ಲಿ ಸುಮಾರು 106 ಕೋಟಿ ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ 3,309 ರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.

      ರಾಜ್ಯದಲ್ಲಿ ಚುನಾವಣೆಗೆ ಬೇಕಾದ ಭದ್ರತಾ ವ್ಯವಸ್ಥೆ ಮಾಡಲು ಎಲ್ಲ ಎಸ್ ಪಿ ಗಳಿಗೆ ಅವರು ಸೂಚನೆ ನೀಡಿದರು. “ಇನ್ನು ಮೂರು ದಿನ ನಿಮ್ಮ ಕೆಲಸ ಬಹಳ ಮಹತ್ವದ್ದಾಗಿದೆ, ಬಹಳ ಜವಾಬ್ದಾರಿಯಿಂದ ಕೂಡಿದ್ದು ಹೆಚ್ಚು ಜಾಗರೂಕರಾಗಿರಬೇಕು, ವಾಹನಗಳ ತಪಾಸಣೆ ಮತ್ತು ಕಟ್ಟುನಿಟ್ಟಿನ ಶೋಧ ನಡೆಸಬೇಕು” ಎಂದು ನಿರ್ದೇಶಿಸಿದರು.

      ಏಪ್ರಿಲ್ 11 ರಂದು ಮುಕ್ತ ಮತ್ತು ಶಾಂತ ಚುನಾವಣೆ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳಿಗೆ ಮುಖ್ಯ ಕಾರ್ಯದರ್ಶಿ ಸುಬ್ರಮಣ್ಯಂ ನಿರ್ದೇಶನ ನೀಡಿದರು. ಹಣ ಮತ್ತು ಮದ್ಯದ ವಿತರಣೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಅವರು ನಿರ್ದೇಶಿಸಿದರು. ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು

      ಮುಖ್ಯ ಚುನಾವಣಾಧಿಕಾರಿ ಗೋಪಾಲ್ ಕೃಷ್ಣ ದ್ವಿವೇದಿ ಮಾತನಾಡಿ, ಮತದಾರರಿಗೆ ಕುಳಿತುಕೊಳ್ಳಲು ಕುರ್ಚಿಗಳನ್ನು ವ್ಯವಸ್ಥೆಗೊಳಿಸುವುದು ಮತ್ತು ಮತದಾನ ಕೇಂದ್ರಗಳ್ಳಲ್ಲಿ ಶುದ್ಧ ಕುಡಿಯುವ ನೀರು, ವೃದ್ಧರು, ಅಂಗವಿಕಲರು ಮತ್ತು ಗರ್ಭಿಣಿ ಸ್ತ್ರೀಯರು ಯಾವುದೇ ತ್ರಾಸವಿಲ್ಲದೆ ಮತ ಚಲಾಯಿಲಸಲು ಅನುಕೂಲ ಮತ್ತು ವ್ಯವಸ್ಥೆ ಮಡಿಕೊಡಬೇಕು ಎಂದರು.

       ಏಪ್ರಿಲ್ 9 ರಂದು ಸಂಜೆ 6 ರಿಂದ ಸಂಜೆ 6 ರಿಂದ ಏಪ್ರಿಲ್ 11 ಸಂಜೆ ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಅಬಕಾರಿ ಮುಖ್ಯ ಕಾರ್ಯದರ್ಶಿ ಡಿ. ಸಾಂಬಶಿವ ರಾವ್ ಹೇಳಿದರು. ಗೃಹ ಕಾರ್ಯದರ್ಶಿ ಆರ್. ಅನುರಾಧಾ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link