ಬೆಂಗಳೂರು
ಈಜಿಪುರದ ಫಾಸ್ಟ್ ಫುಡ್ ಹೋಟೆಲ್‍ನಲ್ಲಿಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿರುವ ತಿಲಕ್ ನಗರ ಪೊಲೀಸರು, 11 ಕೆಜಿ 200 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ . ಕೋರಮಂಗಲದ ಮನ್‍ದೀಪ್ ರೈ (40), ತ್ರಿಪುರಾದ ಮಿನ್‍ರಲ್ ಕಾಂತಿ ದೇಬನಾಥ್ (33), ಪ್ರಸನ್ ಜಿತ್ (23) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ 11 ಕೆಜಿ 200 ಗ್ರಾಂ ಗಾಂಜಾ, ಹೊಂಡಾ ಆಕ್ಟೀವಾ ಸ್ಕೂಟರ್ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆರೋಪಿ ಮನ್‍ದೀಪ್ ರೈ ಪಶ್ಚಿಮ ಬಂಗಾಳ ಮೂಲದವನಾಗಿದ್ದು, ಈತ ಈಜಿಪುರದಲ್ಲಿ ಫಾಸ್ಟ್ ಫುಡ್ ಹೋಟೆಲ್ ನಡೆಸುತ್ತಿದ್ದನು ಇತರೆ ಆರೋಪಿಗಳಿಂದ ಕಡಿಮೆ ಬೆಲೆಗೆ ಮಣಿಪುರದಿಂದ ಗಾಂಜಾ ತರಿಸಿಕೊಂಡು ಮೂವರು ಸೇರಿ ಈಶಾನ್ಯ ರಾಜ್ಯದ ಹೋಟೆಲ್‍ಗಳಲ್ಲಿ ಕೆಲಸ ಮಾಡುವ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿಯ ಮೇರೆಗೆ ಹೋಟೆಲ್ ಮೇಲೆ ದಾಳಿ ನಡೆಸಿದ ತಿಲಕ್ ನಗರ ಪೊಲೀಸರು ದಾಳಿ ನಡೆಸಿ, 11 ಕೆಜಿ 200 ಗ್ರಾಂ ಗಾಂಜಾ, ಹೊಂಡಾ ಆಕ್ಟೀವಾ ಸ್ಕೂಟರ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ