ಕೆಎಸ್‍ಆರ್ ಟಿಸಿ ಬಸ್ ನಲ್ಲಿ 11 ಲಕ್ಷ ನಗದು ವಶ

ಬಳ್ಳಾರಿ: 

     ಉಪಚುನಾವಣಾ ಸಂದರ್ಭದಲ್ಲಿ ಯಾವುದೇ ಸರಿಯಾದ  ದಾಖಲೆಗಳಿಲ್ಲದೇ ಅನುಮಾನಾಸ್ಪದವಾಗಿ  ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಹಣ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 11 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ ಎಂದು ಬಳ್ಳಾರಿ ಸ್ಥಿರ ಕಣ್ಗಾವಲು ಪಡೆ ತಿಳಿಸಿದೆ .

      ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಜಿಟಿಟಿಸಿ ಬಳಿ ಸ್ಥಾಪಿಸಲಾಗಿರುವ ಸ್ಥಿರ ಕಣ್ಗಾವಲು ಪಡೆ (ಎಸ್‍ಎಸ್ಟಿ) ಚೆಕ್‍ ಪೋಸ್ಟ್ ಬಳಿ ಶುಕ್ರವಾರ ರಾತ್ರಿ ಹಣವನ್ನು ಜಪ್ತಿ ಮಾಡಲಾಗಿದೆ. ದಾವಣಗೆರೆಯಿಂದ ಸೋಲಾಪುರಕ್ಕೆ (ಕೆಎ-17,ಎಫ್-1673) ನಂಬರ್ ನ ಕೆಎಸ್‍ಆರ್ ಟಿಸಿ ಬಸ್ ಹೋಗುತ್ತಿತ್ತು. ಈ ವೇಳೆ ಸ್ಥಿರ ಕಣ್ಗಾವಲು ಪಡೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗ ಬಸ್ಸಿನಲ್ಲಿ 11,05,200 ರೂ. ಹಣ ಪತ್ತೆಯಾಗಿದೆ ಎಮದು ಮೂಲಗಳು ತಿಳಿಸಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap