ಬಳ್ಳಾರಿ:
ಉಪಚುನಾವಣಾ ಸಂದರ್ಭದಲ್ಲಿ ಯಾವುದೇ ಸರಿಯಾದ ದಾಖಲೆಗಳಿಲ್ಲದೇ ಅನುಮಾನಾಸ್ಪದವಾಗಿ ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಹಣ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 11 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ ಎಂದು ಬಳ್ಳಾರಿ ಸ್ಥಿರ ಕಣ್ಗಾವಲು ಪಡೆ ತಿಳಿಸಿದೆ .
ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಜಿಟಿಟಿಸಿ ಬಳಿ ಸ್ಥಾಪಿಸಲಾಗಿರುವ ಸ್ಥಿರ ಕಣ್ಗಾವಲು ಪಡೆ (ಎಸ್‍ಎಸ್ಟಿ) ಚೆಕ್ ಪೋಸ್ಟ್ ಬಳಿ ಶುಕ್ರವಾರ ರಾತ್ರಿ ಹಣವನ್ನು ಜಪ್ತಿ ಮಾಡಲಾಗಿದೆ. ದಾವಣಗೆರೆಯಿಂದ ಸೋಲಾಪುರಕ್ಕೆ (ಕೆಎ-17,ಎಫ್-1673) ನಂಬರ್ ನ ಕೆಎಸ್‍ಆರ್ ಟಿಸಿ ಬಸ್ ಹೋಗುತ್ತಿತ್ತು. ಈ ವೇಳೆ ಸ್ಥಿರ ಕಣ್ಗಾವಲು ಪಡೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗ ಬಸ್ಸಿನಲ್ಲಿ 11,05,200 ರೂ. ಹಣ ಪತ್ತೆಯಾಗಿದೆ ಎಮದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
